ದಲಿತರ ಶಕ್ತಿ ದಮನಗೊಳಿಸಲು ಪ್ರಧಾನಿ ಹುನ್ನಾರ: ರಾಹುಲ್ ಕಟು ಟೀಕೆ


ಹೊಸದಿಲ್ಲಿ: ದಲಿತರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿಯತ್ತನ್ನು ಪ್ರಶ್ನಿಸಿರುವ ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಸಮಾಜದ ದುರ್ಬಲ ವರ್ಗದವರನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ದೂಷಿಸಿದ್ದಾರೆ.

ಜಂತರ್ ಮಂತರ್ ನಲ್ಲಿ ಭಾಷಣ ಮಾಡಿದ ಗಾಂಧಿ,  ಮುಂಬರುವ ಲೋಕಸಭಾ ಚುನಾವಣೆಗಾಗಿ ಬಿಜೆಪಿಯ ” ಉತ್ತಮ ನಿಯತ್ತು, ಸರಿಯಾದ ಅಭಿವೃದ್ಧಿ ” ಘೋಷ ವಾಕ್ಯದ ಬಗಗೆ  ಕಿಡಿಕಾರಿದರು.

ಏನೇ ನಿಯತ್ತಾದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೃದಯದಿಂದ ಹೊರಬಿದ್ದ ನಂತರ ಅದು ಕೆಲಸ ಮಾಡಬೇಕು. ದಲಿತರು ಅಂಚಿಗೆ ತಳ್ಳಲ್ಪಡಬೇಕು ಎಂದು ಮೋದಿ ಬಯಸುತ್ತಾರೆ.ಮೋದಿಯ ಹೃದಯಲ್ಲಿ ದಲಿತರಿಗೆ ಸ್ಥಾನವಿದ್ದಿದ್ದರೆ ಅವರ  ಕಾರ್ಯಕ್ರಮಗಳ ರೂಪುರೇಷೆಯಲ್ಲಿ ಇಷ್ಟರೊಳಗೆ ಗೊತ್ತಾಗಬೇಕಿತ್ತು. ಪ್ರಧಾನಿ ಮೋದಿಯವರು ತಮ್ಮದೇ ಒಂದು ಪುಸ್ತಕದಲ್ಲಿ ದಲಿತನೊಬ್ಬ ಮನೆ ಸ್ವಚ್ಛಗೊಳಿಸಿದರೆ ಹೆಚ್ಚು ಆನಂದವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದೆ. ರಾಜೀವಗಾಂಧಿ ಇದನ್ನು ದೇಶಕ್ಕೆ ಕೊಟ್ಟಿದ್ದಾರೆ. ಎಸ್ .ಸಿ/ಎಸ್ ಟಿ ಕಾಯ್ದೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ರಾಹುಲ್ ಗುಡುಗಿದರು.

Leave a Reply

Your email address will not be published.