13 ರಂದು ರಾಹುಲ್ ಬೀದರಗೆ


ಬೀದರ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಸ್ಟ್ 13 ರಂದು ಬೀದರ್ ಗೆ ಭೇಟಿ ನೀಡಲಿದ್ದು, ಜನಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಹಳ ದಿನಗಳ ನಂತರ ರಾಜ್ಯಕ್ಕೆ ಆಗಮಿಸುತ್ತಿರುವ ನಾಯಕನನ್ನು  ಭೇಟಿ ಮಾಡಿ ಒತ್ತಡ ಹೇರಲು ಸಚಿವ ಸ್ಥಾನ ಆಕಾಂಕ್ಷಿಗಳು ಪ್ಲಾನ್ ಮಾಡಿದ್ದಾರೆ. ಸಚಿವ ಸ್ಥಾನದ ಜತೆಗೆ ನಿಗಮ-ಮಂಡಳಿಗಳ ನೇಮಕಕ್ಕೂ ಒತ್ತಡ ಹೇರಲು ಆಕಾಂಕ್ಷಿಗಳು ನಿರ್ಧರಿಸಿದ್ದಾರೆ.

ರಾಜ್ಯ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿ ಹೇರಿ ಸುಸ್ತು ಹೋಗಿರುವ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಗಳ  ಆಕಾಂಕ್ಷಿಗಳು ನೇರವಾಗಿ ರಾಹುಲ್ ರನ್ನು ಭೇಟಿ ಮಾಡಿ ಒತ್ತಡ ಹೇರಲು ನಿರ್ಧರಿಸಿದ್ದಾರೆ.

Leave a Reply

Your email address will not be published.