ಚಿತ್ರದುರ್ಗದಲ್ಲಿ ರಾಜಾ ವೀರ ಮದಕರಿ ನಾಯಕ ಜಯಂತಿ ಆಚರಣೆ


ಚಿತ್ರದುರ್ಗ: ನಾಡದೊರೆ  ರಾಜಾ ವೀರ ಮದಕರಿ ನಾಯಕರ  ಜಯಂತಿಯನ್ನು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ  ವತಿಯಿಂದ  ಆಚರಿಸಲಾಯಿತು. 

ಇಲ್ಲಿನ ವೀರ ಮದಕರಿ ವೃತ್ತದಲ್ಲಿರುವ  ರಾಜಾ ಮದಕರಿ ನಾಯಕರ ಪ್ರತಿಮೆಗೆ ಶನಿವಾರ  ಮಾಲಾರ್ಪಣೆ ಮಾಡುವ ಮೂಲಕ ಆಚರಣೆ  ಮಾಡಲಾಯಿತು. 

ಪ್ರತಿ ವರ್ಷ ಆ. 4 ರಿಂದ ತಿಂಗಳ ಅಂತ್ಯದ ವರೆಗೆ ಅನುಕೂಲಕ್ಕೆ ತಕ್ಕಂತೆ ಪ್ರತಿ ಗ್ರಾಮ,ತಾಲ್ಲೂಕು,ಜಿಲ್ಲಾ ಕೇಂದ್ರಗಳಲ್ಲಿ ಮದಕರಿ ಸಮುದಾಯದವರು ಹಾಗೂ ಮದಕರಿ ಅಭಿಮಾನಿಗಳು ಎಲ್ಲರೂ ಕೂಡಿ ಯಾವದೇ ರಾಗ ದ್ವೇಶಗಳಿಲ್ಲದೆ ಅಚ್ಚುಕಟ್ಟಾಗಿ ನಾಡ ದೊರೆ ಗಂಡುಗಲಿ ರಾಜಾ ವೀರ ಮದಕರಿನಾಯಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರ ಜಯಂತಿಯನ್ನ ಆಚರಣೆ ಮಾಡಬೇಕು ಎಂದು  ವಾಲ್ಮೀಕಿ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಾರುತಿ (ಮದಕರಿ ಮಧು) ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ  ರುದ್ರಪ್ಪಾ, ಗೋವಿಂದ ಮತ್ತಿತರರು ಇದ್ದರು. 

 

Leave a Reply

Your email address will not be published.