ಬಿಜೆಪಿಯಿಂದ ಜೆಡಿಎಸ್ ಗೆ 20 ಶಾಸಕರು ಬರ್ತಾರಂತೆ !!


ಹಾಸನ: ಬಿಜೆಪಿಯಿಂದ 20 ಜನ ಶಾಸಕರು ನಮ್ಮ ಜತೆ ಬರಲು ಸಿದ್ದರಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಬರಲಿರುವ ಈ ಶಾಸಕರನ್ನು ಸದ್ಯ ನಾನೇ ಬೇಡ ಎಂದು ತಡೆದಿದ್ದೇನೆ ಎಂದು ಹೇಳಿದರು.

ನಮಗೆ ಆಪರೇಷನ್ ಮಾಡುವ ಯಾವ ಅಗತ್ಯವೂ ಇಲ್ಲ. ಕಾಂಗ್ರೆಸ್ ನವರು ಚುನಾವಣೆಗೆ ಮುನ್ನ ಜೆಡಿಎಸ್, ಬಿಜೆಪಿಯ  ಎ, ಬಿ ಟೀಂ ಎಂದು ಹೇಳಿದ್ದರು. ಹಾಗೊಂದು ವೇಳೆ ಹೇಳಿರದಿದ್ದರೆ ಬಿಜೆಪಿಗೆ ಇನ್ನೂ 30 ಸ್ಥಾನ ಕಡಿಮೆ ಬರುತ್ತಿತ್ತು. ಬಿಜೆಪಿಯಲ್ಲಿ ಯಡಿಯೂರಪ್ಪ ಹಿರಿಯರು. ಅವರ ಆರೋಗ್ಯ ಚೆನ್ನಾಗಿರಿ ಎಂದೂ ರೇವಣ್ಣ ಹೇಳುವ ಮೂಲಕ ಅಚ್ಚರಿ ಮೂಡಿಸದ್ದಾರೆ.

Leave a Reply

Your email address will not be published.