ಶಾಲಾ ಬಸ್ ಹಾಯ್ದು ಎರಡು ವರ್ಷದ ಹಸುಳೆ ಸಾವು !


ಹಾಸನ: ಶಾಲಾ ಬಸ್ಸೊಂದು ಹಾಯ್ದ ಪರಿಣಾಮ ಎರಡು ವರ್ಷದ ಹೆಣ್ಣು ಮಗುವೊಂದು ಸಾವಿಗೀಡಾದ ಘಟನೆ ಬೇಲೂರು ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ರಮೇಶ -ನಂದಿನಿ ದಂಪತಿ ಪುತ್ರಿ ಚರಣ್ಯ (2) ಮೃತ ಮಗು. ಸಹೋದರ ಶಾಲೆಗೆ ಹೋಗುತ್ತಿರುವ ವೇಳೆ ಮಗು ಬಸ್ಸಿನ ಬಳಿ ಬಂದಿತ್ತು. ಸಹೋದರ ಬಸ್ಸು ಹತ್ತಿದಾಗ ಮಗು ಬಸ್ಸಿನ ಮುಂದೆ ಬಂದಿತ್ತು. ಇದನ್ನು ಗಮನಿಸದೇ ಚಾಲಕ ಬಸ್ಸು ಓಡಿಸಿದಾಗ ಈ ದುರಂತ ಸಂಭವಿಸಿದೆ.

ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.