ಸಹೋದರತೆಯ ಭಾತೃತ್ವ ಬೆಳೆಸಿಕೊಳ್ಳಲು ಭಾರತಿ ದರ್ಶನಾಪುರ ಕರೆ


ಶಹಾಪುರ: ಇಂದಿನ ಯಾಂತ್ರಿಕ ಬದುಕಿನತ್ತ ಸಾಗುತ್ತಿರುವ ಮನುಷ್ಯ ಮಾನವೀಯ ಸಂಬಂಧಗಳನ್ನು ಮರೆಯುತ್ತಿರುವದು ತುಂಬಾ ನೋವಿನ ಸಂಗತಿ ಎಂದು ಶ್ರೀಮತಿ ಭಾರತಿ ದರ್ಶನಾಪುರ ಹೇಳಿದರು.

ಶಹಾಪೂರ ನಗರದ ಕೃಷ್ಣಪಟ್ಟಣ ಬ್ಯಾಂಕಿನ ಉಪಾಧ್ಯಕ್ಷರಾದ ವಿಮಲಾ ಕಲಬುರ್ಗಿಯವರ ಮನೆಯಲ್ಲಿ ಗುರುವಾರ ಫ್ರೆಂಡ್ಶಿಪ್ ಡೇ ಅಂಗವಾಗಿ ಏರ್ಪಡಿಸಿದ ಸ್ನೇಹ ವಾರದ ಸಂಭ್ರಮ ಕಾರ್ಯಕ್ರಮ ಕುರಿತು ಮಾತನಾಡಿದರು.

ಪ್ರತಿಯೊಬ್ಬರೂ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಸಹಬಾಳ್ವೆ ಸಹೋದರತೆಯಿಂದ ಕಾಣದಾಗ ಮಾತ್ರ ಉತ್ತಮ ಬದುಕು ಸಾಗಿಸಲು ಸಾಧ್ಯ ಎಂದು ಉಪನ್ಯಾಸಕಿ ಹಣಮಂತಿ ಗುತ್ತೇದಾರ ಸಲಹೆ ನೀಡಿದರು.

ಈ ಸಮಾರಂಭದಲ್ಲಿ ರೇಣುಕಾ ಆರ್ ಚಟ್ಟರಕಿ,ವಿಮಲಾ ಕಲಬುರಗಿ, ಸಂಗಮ್ಮ ಶೆಟ್ಟರ್, ನಿರ್ಮಲಾ ಉಪ್ಪಿನ್, ನ್ಯಾಯವಾದಿಗಳಾದ ಬಸಮ್ಮ ರಾಂಪುರೆ, ಅರ್ಚನಾ ಧೋತ್ರೆ, ಶರಣಮ್ಮಾ ಉಕ್ಕಿನಾಳ, ಅನಿತಾ ಇಟಗಿ, ಸರಸ್ವತಿ, ಖಮುರುನಾ ಬೇಗಂ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.