ಲಾರಿ-ಬೈಕ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಬೈಕ್ ಸವಾರ ದಾರುಣ ಸಾವು


ಶಹಾಪುರ: ಲಾರಿ ಮತ್ತು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರ ದಾರುಣ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಳ್ಳಂ ಬೆಳಿಗ್ಗೆ  ತಾಲ್ಲೂಕಿನ ನಾಯ್ಕಲ್ ಗ್ರಾಮದ ಪೆಟ್ರೋಲ್ ಪಂಪ್ ಹತ್ತಿರ ಜರುಗಿದೆ.

ಈರಣ್ಣ ಬಡಿಗೇರ(33) ಮೃತ ವ್ಯಕ್ತಿ ಶಹಾಪುರ ತಾಲೂಕಿನ ತಡಿಬಿಡಿ ಗ್ರಾಮದ ಮೂಲ ನಿವಾಸಿ ಇಂದು ಬೆಳಗ್ಗೆ ಯಾದಗಿರಿಯಿಂದ ತಡಿಬಿಡಿ ಗ್ರಾಮಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ.

ಈ ಘಟನೆಯ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.