ಡೀಸೆಲ್ ಟ್ಯಾಂಕರ್ ಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು.


ಶಹಾಪುರ: ಅತಿ ವೇಗವಾಗಿ ಸಾಗುತ್ತಿದ್ದ ಡೀಸೆಲ್ ಟ್ಯಾಂಕರಿಗೆ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಬಾಪುಗೌಡ ಸರ್ಕಲ್ ನಲ್ಲಿ ಜರುಗಿದೆ.

ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ನಿವಾಸಿಯಾದ ವಿಶ್ವನಾಥ್ ಗೋಡಿಹಾಳ (೨೮) ಕೆಲಸದ ನಿಮಿತ್ತ ಶಹಾಪುರಕ್ಕೆ ಬರುವಾಗ ಎದುರುಗಡೆಯಿಂದ ಬಂದ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಘಟನೆಯಲ್ಲಿ ಅಸುನೀಗಿದ್ದಾನೆ.

ಈ ದುರ್ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಲ್ ನಲ್ಲಿ ನಿಂತಿರುವ ಪ್ರತ್ಯಕ್ಷ ದರ್ಶಿಗಳೊಬ್ಬರು ಹೇಳಿದರು.

Leave a Reply

Your email address will not be published.