ಬೆಳಗಾವಿಯಿಂದ ಹಾಸನಕ್ಕೆ ಕಚೇರಿ ಸ್ಥಳಾಂತರ: ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಿಲ್ಲ


ಕೊಪ್ಪ: ಬೆಳಗಾವಿಯಿಂದ ಕೆಲ ಕಛೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸುವ ಕುರಿತು  ಸಮನ್ವಯ ಸಮಿತಿಯಲ್ಲಿ ಚರ್ಚೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಿತಿ ಸಭೆ ನಡೆಯದ ಕಾರಣ ನಾನು ಮುಖ್ಯಮಂತ್ರಿಗೆ ಈ ಕುರಿತಂತೆ  ಪತ್ರ ಬರೆದಿದ್ದೆ ಎಂದು ಅವರು ಕೊಪ್ಪಳ ನಗರ ಸಮೀಪದ ಎಂಎಸ್ ಪಿಎಲ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ  ಮಾಧ್ಯಮದವರೊಂದಿಗೆ ಮಾತನಾಡುತ್ತ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸ್ಪರ್ಧೆ ಬಗ್ಗೆ ಚರ್ಚೆಗಳು ನಡೆದಿವೆ, ಮೈತ್ರಿ ಸಾಧ್ಯತೆ ಇದೆ. ರಾಜ್ಯದ ಮೈತ್ರಿ ಸರಕಾರಕ್ಕೆ ಯಾವುದೇ ಆತಂಕವಿಲ್ಲವೆಂದು ಹೇಳಿದ ಸಿದ್ದರಾಮಯ್ಯ ಕೊಪ್ಪಳದಿಂದ ಲೋಕಸಭೆಗೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬ ಮುಖಂಡರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು ಇಕ್ಬಾಲ್ ಅನ್ಸಾರಿ ಹಾಗೂ ಶಿವರಾಮೇಗೌಡ ಜೆ.ಡಿ.ಎಸ್ ಬಗ್ಗೆ ಮಾತನಾಡಿದ್ದು ಅವರ  ವೈಯಕ್ತಿಕ ಅಭಿಪ್ರಾಯವೆಂದರು. ನಂತರ ೧೦ ನಿಮಿಷಗಳ ಕಾಲ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಗೌಪ್ಯ ಮಾತುಕತೆ ನಡೆಸಿದರು.

Leave a Reply

Your email address will not be published.