ಈಶ್ವರಪ್ಪ ಪೆದ್ದ ಎಂದು ಜರಿದ ಸಿದ್ದರಾಮಯ್ಯ !


ಕೊಪ್ಪಳ : ಕೆ. ಎಸ್. ಈಶ್ವರಪ್ಪ ಒಬ್ಬ ಪೆದ್ದ ಎಂದು  ಮಾಜಿ ಸಿಎಂ, ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕುಟುಕಿದ್ದಾರೆ.

ಹಲವು ಯೋಜನೆಗಳ ಜಾರಿಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರಗಳನ್ನು ಬರೆದಿರುವ ಬಗ್ಗೆ ಈಶ್ವರಪ್ಪ , ಗುಮಾಸ್ತನಂತೆ ಪತ್ರ ಬರೆಯುತ್ತಾರೆ ಎಂದು ಟೀಕಿಸಿದ್ದರು.

ಈಶ್ವರಪ್ಪ ಪೆದ್ದ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೊಪ್ಪಳ  ತಾಲೂಕಿನ ಬಸಾಪುರದಲ್ಲಿ ಸಿದ್ಧರಾಮಯ್ಯ ಹೇಳುವ ಜತೆಗೆ  ಕೈಸನ್ನೆ ಮಾಡಿ ಈಶ್ವರಪ್ಪ ತಲೆ ಸರಿಯಿಲ್ಲ ಎಂದೂ ಹೇಳಿದರು.

Leave a Reply

Your email address will not be published.