ಕರ್ತವ್ಯದಲ್ಲಿದ್ದ ಖಾನಾಪೂರದ ಯೋಧ ಸಾವು: ಇಂದು ಅಂತ್ಯಕ್ರಿಯೆ

ಮೌಲಾಲಿ ಪಾಟೀಲ (40) ಮೃತಪಟ್ಟ ಯೊಧ

ಖಾನಾಪೂರ: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಕಸಮಳಗಿ ಗ್ರಾಮದ   ಕರ್ತವ್ಯದಲ್ಲಿದ್ದ ಯೋಧನೊಬ್ಬ ಸಾವನ್ನಪ್ಪಿದ್ದಾನೆ.  

 
ಇಲ್ಲಿನ ಬೀಡಿ ಸಮೀಪದ ಕಸಮಳಗಿ ಗ್ರಾಮದ  ಮೌಲಾಲಿ ಪಾಟೀಲ (40) ಮೃತಪಟ್ಟ ಯೊಧನಾಗಿದ್ದು,  ಚಿಕಿತ್ಸೆಗೆಂದು ಪುಣೆಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. 
 
ಮೃತ ಯೋಧನು ಕಳೆದ 21 ವರ್ಷದಿಂದ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ಧರು. ಕಳೆದ ವರ್ಷದಿಂದ ಪಶ್ಚಿಮ ಬಂಗಾಳದ ಪಾನಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.ಮೃತ ಯೋಧನಿಗೆ ಪತ್ನಿ, ‌ಒರ್ವ ಪುತ್ರ, ತಂದೆ, ತಾಯಿ‌ ಮತ್ತು ಮೂವರು ಸಹೋದರರು ಇದ್ದಾರೆ.
 
ಇಂದು ಬೆಳಗಿನ ಜಾವ 8 ಗಂಟೆಗೆ ಮೃತ ಯೋಧನ ಪಾರ್ಥಿವ ಶರೀರ ಸ್ವಗ್ರಾಮವಾದ ಕಸಮಳಗಿಗೆ ಆಗಮಿಸಿದ್ದು, 10.30 ಗಂಟೆಗೆ ಸರಕಾರಿ ಗೌರವ ವಂದನೆ ಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

Leave a Reply

Your email address will not be published.