ಅಭ್ಯಾಸಕ್ಕೆ ಕೊಟ್ಟಷ್ಟು ಮಹತ್ವ ಕ್ರೀಡೆಗೂ ಕೊಡಿ: ಶಾಸಕ ನಡಹಳ್ಳಿ


ಮುದ್ದೇಬಿಹಾಳ : ಅಧ್ಯಯನಕ್ಕೆ ಕೊಟ್ಟಷ್ಟು ಮಹತ್ವವನ್ನು ಕ್ರೀಡೆಗೂ ಕೊಡಬೇಕು ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 2018-19ನೇ ಸಾಲಿನ ಮುದ್ದೇಬಿಹಾಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ದೈಹಿಕ ಸಧೃತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಪಠ್ಯದ ಭಾರ ಇಳಿಸುವ ಜೊತೆಗೆ ಕ್ರೀಡೆ ಹಾಗೂ ಪಠ್ಯಕ್ಕೆ ಸಮಾನ ಆದ್ಯತೆ ನೀಡುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದ್ದು ಅದಕ್ಕಾಗಿ ಕಾನೂನು ಶೀಘ್ರ ಜಾರಿಗೊಳಿಸಲಿದೆ ಎಂದರು.

ಡಾ.ಎ.ಎಂ.ಮುಲ್ಲಾ,ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ.ಚಲವಾದಿ  ಬಿಇಓ ಎಸ್.ಡಿ.ಗಾಂಜಿ,ಸಮನ್ವಯಾಧಿಕಾರಿ ಎಂ.ಎಂ.ಬೆಳಗಲ್,ಎಸ್ಡಿಎಂಸಿ ಅಧ್ಯಕ್ಷ ಮಹಿಬೂಬ ಗೊಳಸಂಗಿ,ಸಮಾಜ ಸೇವಕ ಅಯ್ಯೂಬ ಮನಿಯಾರ್,ಇಸ್ಮಾಯಿಲ ಗೊಳಸಂಗಿ,ಇಸಿಓ ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ,ಪುರಸಭೆ ಸದಸ್ಯರಾದ ಸಂತೋಷ ನಾಯ್ಕೋಡಿ,ರಾಜು ಹೊನ್ನುಟಗಿ,ಬಿಆರ್‍ಪಿ ಎಸ್.ಬಿ.ಸಜ್ಜನ,ಸಿಆರ್‍ಪಿ ಎಂ.ಎ.ತಳ್ಳಿಕೇರಿ,ಡಿ.ಆರ್.ಸಿಂಧಗಿ,ಎಫ್.ಎಸ್.ಬಾಗವಾನ,ಎಚ್.ಎಲ್.ಕರಡ್ಡಿ,ಎಸ್.ಆರ್.ಸುಲ್ಪಿ ಇನ್ನಿತರರು ಇದ್ದರು.ತಹಸೀಲ್ದಾರ್ ಎಂ.ಎಸ್.ಬಾಗವಾನ ಕ್ರೀಡಾಜ್ಯೋತಿ ಸ್ವೀಕರಿಸಿದರು.ದೈಹಿಕ ಶಿಕ್ಷಕ ಸಂಘದ ಉಪಾಧ್ಯಕ್ಷ ಎ.ಸಿ.ಕೆರೂರ ಪ್ರಮಾಣ ವಚನ ಬೋಧಿಸಿದರು.ಆರ್.ಬಿ.ಮ್ಯಾಗೇರಿ ಸ್ವಾಗತಿಸಿದರು.ಟಿ.ಡಿ.ಲಮಾಣಿ ನಿರೂಪಿಸಿದರು.

Leave a Reply

Your email address will not be published.