ಮದ್ಯದ ಅಮಲಿನಲ್ಲಿ ನೇಣಿಗೆ ಶರಣಾದ !


ಬೆಂಗಳೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಂದ್ರಾ ಲೇ ಔಟ್ ನಲ್ಲಿ ನಡೆದಿದೆ.

ಚಂದ್ರಾ ಲೇ ಔಟ್ ನ ರೈಲ್ವೆ ಕಾಲೋನಿಯ ಸಿದ್ದಲಿಂಗಯ್ಯ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನೆಂದು ಹೇಳಲಾಗಿದೆ.

ಚಂದ್ರಾ ಲೇ ಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆದಿದೆ.

Leave a Reply

Your email address will not be published.