ತ್ರಿವಳಿ ತಲಾಖ್ ಮಸೂದೆ: ಇಂದು ರಾಜ್ಯಸಭೆಯಲ್ಲಿ ಮಂಡನೆ


ಹೊಸದಿಲ್ಲಿ:ದೇಶಾದ್ಯಂತ ತೀವ್ರ ಕುತೂಹಲದ ಚರ್ಚೆಗೆ ಗ್ರಾಸವಾಗಿರುವ ತ್ರಿವಳಿ ತಲಾಖ್ ಮಸೂದೆ ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

ಕೇಂದ್ರ ಸಚಿವ ಸಂಪುಟವು ನಿನ್ನೆಯಷ್ಟೇ ಈ ಮಸೂದೆಯನ್ನು ಅಂಗೀಕರಿಸಿದೆ.

ತ್ರಿವಳಿ ತಲಾಖ್ ನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕಾನೂನು ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಕೊಂಡಿತ್ತು

ಒಂದು ವೇಳೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡರೆ ತಿದ್ದುಪಡಿಯ ಅನುಮೋದನೆಗಾಗಿ ಅದನ್ನು ಲೋಕಸಭೆಗೆ ಕಳಿಸಬೇಕಾಗುತ್ತದೆ.

ತ್ರಿವಳಿ ತಲಾಖ್ ಒಂದು ಅಪರಾಧ ಎಂದು ಘೋಷಿಸುವ ಮಸೂದೆಯನ್ನು ಡಿಸೆಂಬರ್ 29 ರಂದು ಲೋಕಸಭೆ ಅಂಗೀಕರಿಸಿದೆ.

ಯಾವುದೇ ಮುಸ್ಲಿಂ ವ್ಯಕ್ತಿ ತನ್ನ ಪತ್ನಿಗೆ ಮೌಖಿಕವಾಗಿ ಅಥವಾ ಲಿಖಿತವಾಗಿ ಇಲ್ಲವೇ ಇ-ಮೇಲ್, ಎಸ್ ಎಂಎಸ್ ಹಾಗೂ ವ್ಯಾಟ್ಸ್ ಪ್ ಮೂಲಕ ತಲಾಖ್ ನೀಡುವುದು ಮೂರು ವರ್ಷಗಳ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

Leave a Reply

Your email address will not be published.