ಯಶ್ ಗಡ್ಡಕ್ಕೆ ಕೊನೆಗೂ ಬಿತ್ತು ಕತ್ತರಿ: ಪತ್ನಿ ರಾಧಿಕಾ ಸೇರಿ ಅಭಿಮಾನಿಗಳು ಫುಲ್ ಹ್ಯಾಪಿ


ಬೆಂಗಳೂರು: ಕಳೆದ 2 ವರ್ಷಗಳಿಂದ ಕೆಜಿಎಪ್ ಚಿತ್ರಕ್ಕಾಗಿ ಗಡ್ಡವನ್ನು ಬೆಳೆಸಿದ್ದ  ಯಶ್ ಈಗ ಬೇರೆ ಸಿನಿಮಾಗಾಗಿ ತಮ್ಮ ಗಡ್ಡಕ್ಕೆ ಕೊನೆಗೂ ಕತ್ತರಿ ಹಾಕಿದ್ದಾರೆ. 

ಪತ್ನಿ ನಟಿ ರಾಧಿಕಾ ಸೇರಿದಂತೆ ಅವರ ಅಭಿಮಾನಿಗಳು 2 ವರ್ಷಗಳಿಂದ ಯಶ್ ಗಡ್ಡ ಲುಕ್ ವನ್ನು ನೋಡಿ ರೋಸಿಹೊಗಿದ್ದು ಕೊನೆಗೂ ಮತ್ತೆ ಅಭಿಮಾನಿಗಳಿಗೆ ಯಶ ಸಂತಸ ನೀಡಿದ್ದಾರೆ. 

ಕಳೆದ 2 ವರ್ಷದಿಂದ ಚಿತ್ರೀಕರಣ ನಡೆದಿದ್ದ ಕೆಜಿಎಫ್​ ಸಿನಿಮಾ ಕಳೆದ ವಾರ ಶೂಟಿಂಗ್​ ಸಂಪೂರ್ಣಗೊಂಡ  ಹಿನ್ನೆಲ್ಲೆಯಲ್ಲಿ. ಉದ್ದ ಗಡ್ಡವನ್ನ ಇಷ್ಟ ಪಟ್ಟರೂ ಅಭಿಮಾನಿಗಳು, ಮತ್ತದೇ ಕ್ಯೂಟ್​ ಗಡ್ಡದ ಯಶ್​ನ ನೋಡಬೇಕು ಅಂತ ಕಾಯ್ತಾ ಇದ್ದರು.  ಯಶ್​ ಪತ್ನಿ ರಾಧಿಕಾ ಪಂಡಿತ್​​ ಯಶ್​ ಗಡ್ಡಕ್ಕೆ ಕತ್ತರಿ ಹಾಕುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 

ಮೈ ನೇಮ್‌ ಈಸ್‌ ಕಿರಾತಕ ಸಿನಿಮಾಕ್ಕಾಗಿ ಲುಕ್​ ಚೇಂಜ್​​​ ಮಾಡಿ ಉದ್ದ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿ ಮತ್ತೆ ಕ್ಯೂಟ್​ ಲುಕ್​ಗೆ ಯಶ್​ ಬದಲಾಗಲು ಕಾರಣವಾಗಿದೆ.

Leave a Reply

Your email address will not be published.