ಧಾರವಾಡ: ಭೀಕರ ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕರು


ಧಾರವಾಡ: ಕೆಲಗೇರಿ ಬಳಿ ಟಾಟಾ ಏಸ್ ಹಾಗೂ  ಕ್ಯಾಂಟರ್ ಮಧ್ಯೆ  ಭೀಕರ ಅಪಘಾತ ಸಂಭವಿಸಿ ಎರಡು ವಾಹನ ಚಾಲಕರ  ಕಾಲುಗಳು ತುಂಡರಿಸಿವೆ.

ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಚಾಲಕರನ್ನು ಮಹಾರಾಷ್ಟ್ರ ಮೂಲದ ಆನಂದ್ ಸಿಂಗ್ ಹಾಗೂ ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದ ಮಂಜುನಾಥ್ ಎಂದು ಗುರುತಿಸಲಾಗಿದೆ.

ಇಬ್ಬರು ಚಾಲಕರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ರಭಸಕ್ಕೆ  ಟಾಟಾ ಏಸ್ ಹಾಗೂ ಕ್ಯಾಂಟರ್ ಜಖಂಗೊಂಡಿದೆ.

ಧಾರವಾಡ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.