ಬೈಲಹೊಂಗಲ ಪುರಸಭೆ ಎರಡನೇ ಬಾರಿ ಕಾಂಗ್ರೆಸ್ ತೆಕ್ಕೆಗೆ


ಬೈಲಹೊಂಗಲ: ಪಟ್ಟಣದ ಪುರಸಭೆ  ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಸೋಮವಾರ ನಡೆದ ಪುರಸಭೆ 27 ವಾರ್ಡಿನ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ 18, ಬಿಜೆಪಿ 6, ಪಕ್ಷೇತರ 3 ಅಭ್ಯರ್ಥಿಗಳು ಗೆಲುವು ಸಾಧಿಸಿದರೆಂದು ಚುನಾವಣಾಧಿಕಾರಿ, ತಹಶೀಲ್ದಾರ ಪ್ರಕಾಶ ಗಾಯಕವಾಡ ಘೋಷಿಸಿದರು.

ಬೆಳಗ್ಗೆ  8ಕ್ಕೆ ಮತ ಏಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳು, ಬೆಂಬಲಿಗರು ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜಮಾಯಿಸಿದರು. ಕೊಠಡಿ ಸಂಖ್ಯೆ 1ರಲ್ಲಿ ವಾರ್ಡ್ ನಂ.1ರಿಂದ 9, ಕೊಠಡಿ ಸಂಖ್ಯೆ 2ರಲ್ಲಿ ವಾರ್ಡ್ ನಂ.10ರಿಂದ 18, ಕೊಠಡಿ ಸಂಖ್ಯೆ 3ರಲ್ಲಿ 19ರಿಂದ 27ರ ವರೆಗೆ ಮತ ಏಣಿಕೆ ಕಾರ್ಯ ನಡೆಯಿತು.

ಚುನಾವಣಾಧಿಕಾರಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಹೆಸರು ಘೋಷಿಸುತ್ತಿದ್ದಂತೆ ಜಯಶಾಲಿ ಅಭ್ಯರ್ಥಿಗಳು, ಬೆಂಬಲಿಗರು ಗುಲೇಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೊದಲ ಬಾರಿಗೆ ಗೆದ್ದವರು: ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ವಾರ್ಡ್ ನಂ.9ರ ಕಾಂಗ್ರೆಸ್ ಅಭ್ಯರ್ಥಿ ಶಿವಬಸಪ್ಪ ಕುಡಸೋಮಣ್ಣವರ, ವಾರ್ಡ್ ನಂ.1ರ ಕಾಂಗ್ರೆಸ್ ಅಭ್ಯರ್ಥಿ ಅಮೀರಬಿ ಬಾಗವಾನ, ವಾರ್ಡ್ ನಂ.3ರ ಕಾಂಗ್ರೆಸ್ ಅಭ್ಯರ್ಥಿ ಹೇಮಲತಾ ಹಿರೇಮಠ, ವಾರ್ಡ್ ನಂ.19ರ ಕಾಂಗ್ರೆಸ್ ಅಭ್ಯರ್ಥಿ ದಿಲ್ಲಶಾದ ನದಾಫ, ವಾರ್ಡ್ ನಂ.20ರ ಕಾಂಗ್ರೆಸ್ ಅಭ್ಯರ್ಥಿ ಶಶಿಕಲಾ ಹೊಸಮನಿ, ವಾರ್ಡ್ ನಂ.22ರ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಲ್ಲೊಳ್ಳಿ, ವಾರ್ಡ್ ನಂ.14ರ ಕಾಂಗ್ರೆಸ್ ಅಭ್ಯರ್ಥಿ ಅಂಜನಾ ಬೊಂಗಾಳೆ, ವಾರ್ಡ್ ನಂ.6ರ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಬಡ್ಲಿ, ವಾರ್ಡ್ ನಂ.5ರ ಬಿಜೆಪಿ ಅಭ್ಯರ್ಥಿ ಜಗದೀಶ ಜಂಬಗಿ, ವಾರ್ಡ್ ನಂ.8 ಬಿಜೆಪಿ ಅಭ್ಯರ್ಥಿ ಶಿವಾನಂದ ಕೋಲಕಾರ, ವಾರ್ಡ್ ನಂ.25ರ ಬಿಜೆಪಿ ಅಭ್ಯರ್ಥಿ ವಾಣಿ ಪತ್ತಾರ, ವಾರ್ಡ್ ನಂ.13ರ ಬಿಜೆಪಿ ಅಭ್ಯರ್ಥಿ ಸುಧೀರ ವಾಲಿ, ವಾರ್ಡ್ ನಂ.12ರ ಪಕ್ಷೇತರ ಅಭ್ಯರ್ಥಿ ಫಕೀರಪ್ಪ ದೇವಲಾಪೂರ ಗೆಲುವು ಸಾಧಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ವಾರ್ಡ್ ನಂ.15ರ ಪಕ್ಷೇತರ ಅಭ್ಯರ್ಥಿ ಸಾಗರ ಭಾವಿಮನಿ, ವಾರ್ಡ್ ನಂ.23ರ ಕಾಂಗ್ರೆಸ್ ಅಭ್ಯರ್ಥಿ ವಿಜಯ ಬೋಳನ್ನವರ, ವಾರ್ಡ್ ನಂ.11ರ ಕಾಂಗ್ರೆಸ್ ಅಭ್ಯರ್ಥಿ ಅರ್ಜುನ ಕಲಕುಟಕರ ಚುನಾಯಿತರಾದರು.

Leave a Reply

Your email address will not be published.