ಬೆಳಗಾವಿಯಲ್ಲಿ ಮತ್ತೊಂದು ಸೊಸೈಟಿ ವಂಚನೆ: 2 ಕೋಟಿ ಹಣ ವಂಚಿಸಿ ಮ್ಯಾನೇಜರ್ ಪರಾರಿ


ಬೆಳಗಾವಿ: ನಗರದಲ್ಲಿ ಮತ್ತೊಂದು ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಸುಮಾರು 2 ಕೋಟಿ  ಠೇವಣಿ ಹಣವನ್ನು ವಂಚಿಸಿ ವ್ಯವಸ್ಥಾಪಕ  ಪರಾರಿಯಾಗಿದ್ದಾನೆ.

ದಿ. ಸಿದ್ಧಾರ್ಥ ಕೋ. ಆಪ್ ಸೊಸೈಟಿಯಲ್ಲಿ ಈ ವಂಚಣೆ ನಡೆದಿದ್ದು ಸೊಸೈಟಿ  ಸಂಸ್ಥಾಪಕ ಉತ್ತಮ ಮುಕ್ಕಣ್ಣವರ ಅವರು  ಮ್ಯಾನೇಜರ್ ಮೋಹಿತೆ, ಸೇರಿ ನಿರ್ದೇಶಕರ ವಿರುದ್ಧ ಇಲ್ಲಿನ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂಗ್ರಹಿಸಿದ್ದ ಹಣವನ್ನು ದಾಖಲೆಯಲ್ಲಿ ತೋರಿಸದೆ ವಂಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸೊಸೈಟಿ ಹೆಸರಿನಲ್ಲಿ  ಸುಮಾರು 45 ಲಕ್ಷ ಹಣವನ್ನು ಸಾಲದ ರೂಪದಲ್ಲಿ ಪಡೆದು ವ್ಯಯಕ್ತಿಕ ಕಾರಣಕ್ಕೆ ಬಳಕೆ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಾಗಿದೆ.

ಠೇವಣಿ ಹಣ ರೂಪದಲ್ಲಿಟ್ಟಿದ್ದ ಗ್ರಾಹಕರು ತಮ್ಮ ಹಣಕ್ಕಾಗಿ ನಿತ್ಯ ಸೊಸೈಟಿ ಚಕ್ಕರ್ ಹೊಡೆಯುತ್ತಿದ್ದಾರೆ.

Leave a Reply

Your email address will not be published.