ಜಿಲ್ಲೆ ವಿಭಜಿಸಿ ದುರಂತ ನಾಯಕ ಪಟ್ಟಕಟ್ಟಿಕೊಳ್ಳಬೇಡಿ: ಸಿಎಂಗೆ ಕನ್ನಡ ಕ್ರಿಯಾ ಸಮಿತಿ ಸಲಹೆ


ಬೆಳಗಾವಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲಾ ವಿಭಜನೆಗೆ ಕೈ ಹಾಕಬಾರದು ಎಂದು ಮಾಜಿ ಮೇಯರ್ ಸಿದ್ದನಗೌಡ ಪಾಟೀಲ್ ಒತ್ತಾಯಿಸಿದ್ದಾರೆ.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಕ್ರೀಯಾ ಸಮಿತಿವತಿಯಿಂದ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ರಾಜಕೀಯ ದುರುದ್ದೇಶಕ್ಕಾಗಿ ಜಿಲ್ಲಾ ವಿಭಜಿಸಿದರೆ ಕುಮಾರಸ್ವಾಮಿ ಅವರು ದುರಂತ ನಾಯಕ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಜಿಲ್ಲಾ ವಿಭಜನೆಯಿಂದ ದೂರು ಸರಿಯುವುದು ಒಳಿತು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ ನಲ್ಲಿ ವಿಚಾರಣೆ ಹಂತದಲ್ಲಿದೆ. ಅಂತಿಮ ತೀರ್ಪು ಬರೋವರೆಗೂ ಜಿಲ್ಲಾ ವಿಭಜಿಸಬಾರದು.  ಗೋಕಾಕ ಜಿಲ್ಲೆಯನ್ನು ರಚಿಸಿದರೆ ಬೈಲಹೊಂಗಲದವರು ವಿರೋಧಿಸುತ್ತಾರೆ. ಒಂದು ವೇಳೆ ಜಿಲ್ಲೆ ವಿಭಜಿಸಿದರೆ ಪ್ರತಿಭಟನೆ ಬಿಸಿ ತಟ್ಟಲಿದೆ.  ಜಿಲ್ಲಾ ವಿಭಜಿಸುವ ಮುನ್ನ ಈ ಭಾಗದ ಜನಾಭಿಪ್ರಾಯ ಸಂಗ್ರಹಿಸಲಿ ಎಂದು ಸಲಹೆ ನೀಡಿದರು.

ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲಾ ವಿಭಜೆಗೆ ಮುಂದಾಗಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ್ದರಿಂದ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ಕುಮಾರಸ್ವಾಮಿ ಅವರು ಜಿಲ್ಲಾ ವಿಭಜನೆಗೆ ಮುಂದಾಗಿದ್ದಾರೆ. ಸಿಎಂ ಎಚ್ಡಿಕೆ ಗಡಿ ವಿಷಯದ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.  ಗಡಿ ಉಸ್ತುವಾರಿ ಸಚಿವರನ್ನು ನೇಮಿಸದ ಅವರು ಜಿಲ್ಲೆಯನ್ನು ವಿಭಜಿಸಲು ಮುಂದಾಗಿರುವುದು ಖಂಡನೀಯ ಎಂದು ಅಸಮಧಾನ ವ್ಯಕ್ತಪಡಿಸಿದರು.

Leave a Reply

Your email address will not be published.