ಕಂದಕಕ್ಕೆ ಬಿದ್ದ ಬಸ್ಸು: ಹತ್ತು ಜನರ ದುರ್ಮರಣ!


ಜಗಿತ್ಯಾಲ (ತೆಲಂಗಾಣ): ಸರಕಾರಿ ಬಸ್ಸೊಂದು ಕಂದಕಕ್ಕೆ ಬಿದ್ದ ಪರಿಣಾಮ ಹತ್ತು ಜನರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಜಗಿತ್ಯಾಲ ಜಿಲ್ಲೆಯ ಕೊಂಡಗಟ್ಟು ಬಳಿ ಸಂಭವಿಸಿದೆ.

ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ 45 ಕ್ಕೂ ಅಧಿಕ ಪ್ರಯಾಣಿಕರು ಇದ್ದರು. ಬಸ್ ಕಂದಕಕ್ಕೆ  ಬಿದ್ದಾಗ ಮಗು, ಮಹಿಳೆಯರು ಸೇರಿದಂತೆ ಹತ್ತು ಜನರು ದುರ್ಮರಣಕ್ಕೀಡಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಂಶಯವಿ. ಸ್ಥಳೀಯ ಜನರ ಸಹಾಯದಿಂದ ಪೊಲೀಸ್ ಇಲಾಖೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Leave a Reply

Your email address will not be published.