ಕೊಡಗು ಪ್ರವಾಹ: ಇಂದು ಸಿಎಂ ಭೇಟಿ ಮಾಡಲಿರುವ ಕೇಂದ್ರ ತಂಡ


ಬೆಂಗಳೂರು: ಭಾರೀ ಮಳೆಯಿಂದ ಕೋಟ್ಯಂತರ ರೂ. ಹಾನಿಗೊಳಗಾದ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೇಂದ್ರ ಅಧ್ಯಯನ ತಂಡ ಇಂದು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಿದೆ.

ಸೆ.10 ರಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದರು.

ಅದರನ್ವಯ ಅಧ್ಯಯನ ಸಮಿತಿಯು ಎರಡು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದು, ಬೆಳಗ್ಗೆ 11.30ಕ್ಕೆ ಸಿಎಂ ಜತೆ ಭೇಟ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ.

Leave a Reply

Your email address will not be published.