ಚಿಕ್ಕೋಡಿ ಜಿಲ್ಲಾ ರಚನೆಗಾಗಿ ಅ.2 ರಿಂದ ಅಮರಣ ಉಪವಾಸ

ಬಿ.ಆರ್.ಸಂಗಪ್ಪಗೋಳ

ಚಿಕ್ಕೋಡಿ : ಬರುವ ಅಕ್ಟೋಬರ್ 2 ರೊಳಗೆ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡದಿದ್ದರೇ ಅ.2 ರಿಂದ ಅಮರಣ ಉಪವಾಸ ಧರಣಿ ಸಗ್ಯಾಗ್ರಹ ಆರಂಭಿಸಲಾಗುವುದು ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಬುಧುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಿಯೋಗ ತೆರಳಿ ಸೆ. 15 ರಂದು ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದಲಾದರೂ ಚಿಕ್ಕೋಡಿ ಜಿಲ್ಲಾ ಘೋಷಣೆ ಮಾಡುವಂತೆ ಮನವಿ ಸಲ್ಲಿಸಿ, ಒತ್ತಾಯಿಸಲಾಗುವುದು. ಅದಕ್ಕೆ ಅವರಿಂದ ಸರಿಯಾದ ಸ್ಪಂಧನೆ ಬರದಿದ್ದರೇ, ಚಿಕ್ಕೋಡಿ, ಅಥಣಿ, ರಾಯಬಾಗ ಮುಂತಾದ ತಾಲೂಕುಗಳ ಸಾರ್ವಜನಿಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅ. 2 ರಿಂದ ಧರಣಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಪ್ರತೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಅಷ್ಟೊಂದು ಸೂಕ್ತವಲ್ಲ. ಅದರ ಬದಲಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ ಆರಂಭಿಸಬೇಕು. ಅಖಂಡ ಕರ್ನಾಟಕ ಒಡೆಯುವುದು ಬೇಡ. ಹಿಂದೆ ಭಾಷಾವಾರು ಪ್ರಾಂತವಾಗಿತ್ತು. ಈಗ ಜಾತಿವಾರು ಪ್ರಾಂತವಾಗುವುದುಬೇಡ. ಆದ್ದರಿಂದ ಉತ್ತರ ಕರ್ನಾಟಕಕ್ಕೆ ಸರಕಾರದ ವಿವಿಧ ಇಲಾಖೆಗಳ ನಿರ್ದೇಶಕರ ಕಚೇರಿಗಳನ್ನು ಬೆಳಗಾವಿ ಸುವರ್ಣ ಸೌದಕ್ಕೆ ತರುವದು. ಈ ಭಾಗಕ್ಕೆ ದೊಡ್ಡ ದೊಡ್ಡ ಉದ್ಯಮಗಳನ್ನು ತರುವದು ಮತ್ತು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ತರುವ ನಿಟ್ಟಿನಲ್ಲಿ ಹೋರಾಟ ಆರಂಭಿಸಬೇಕು. ಅದನ್ನು ಕೊಡಲು ಸರಕಾರ ಒಪ್ಪದಿದ್ದಲ್ಲಿ ಈ ಸರಕಾರ ಉರುಳಿಸುವ ಕೆಲಸ ಮಾಡಲು ಉತ್ತರ ಕರ್ನಾಟಕದ ನಾಯಕರು ಮುಂದಾಗಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಜೀವಂತ ಉಳಿಸಿ ಸಧ್ಯಕ್ಕೆ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಉಳಿದುಕೊಂಡಿದ್ದು, ರಾಜ್ಯದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮ ತಮ್ಮಲ್ಲಿರುವ ಭಿನ್ನಾಬಿಪ್ರಾಯ ಮತ್ತು ಒಣ ಪ್ರತಿಷ್ಠೆಗಳನ್ನು ಬದಿಗಿಟ್ಟು ಎಲ್ಲ ಒಂದಾಗಿ ಕಾರ್ಯನಿರ್ವಹಿಸುವ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜೀವಂತ ಉಳಿಸುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಬಿ.ಆರ್.ಸಂಗಪ್ಪಗೋಳ ಮನವಿ ಮಾಡಿದರು.

Leave a Reply

Your email address will not be published.