ಚಿಕ್ಕೋಡಿ: ಕುಪ್ಪಾನವಾಡಿ ಪಿಕೆಪಿಎಸ್ ಸಂಘದ ಅಧ್ಯಕ್ಷರಾಗಿ ಸುರೇಶ ಗೌರಾಜ ಅವಿರೋಧ ಆಯ್ಕೆ


ಚಿಕ್ಕೋಡಿ: ತಾಲೂಕಿನ ಕೋಥಳಿ-ಕುಪ್ಪಾನವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪೆನಲ್‍ನ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಸುರೇಶ ದಾದು ಗೌರಾಜ ಮತ್ತು ಉಪಾಧ್ಯಕ್ಷರಾಗಿ ಸೋನಾಲಿ ಭರತೇಶ ಪಿಟಕೆ ಆಯ್ಕೆಯಾಗಿದ್ದಾರೆ. ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ 2018 ರಿಂದ 2013 ರ ಅವಧಿಗಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ಚುನಾವಣಾಧಿಕಾರಿಯಾಗಿ ಡಿಡಿಪಿಐ ಕಚೇರಿಯ ವಿಜಯಕುಮಾರ ಯಳಮಲಿ ಕಾರ್ಯನಿರ್ವಹಿಸಿದರು. ಇದೇ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿ ಸದಸ್ಯರಾದ ಸುಖಾಂತ ಪಾಟೀಲ, ಬಾಹುಬಲಿ ಪಾಟೀಲ, ಧಮೇಂದ್ರ ಪಾಟೀಲ, ಕಾಕಾಸಾಬ ಖೋತ, ಅಣ್ಣಾಸಾಬ ಖೋತ, ಉಜ್ವಲಾ ಅಳಗೌಡಾ, ರಾಣಿ ಹೂವನ್ನವರ, ಸಾತಪ್ಪಾ ಕಾಮನೆ, ಸಂಜೀವ ಸನದಿ, ಬಾಹುಬಲಿ ಉಪಾಧ್ಯೆ ಹಾಗೂ ನೂತನ ಅಧ್ಯಕ್ಷ ಸುರೇಶ ಗೌರಾಜ, ಉಪಾಧ್ಯಕ್ಷೆ ಸೋನಾಲಿ ಪಿಟಕೆ ಅವರನ್ನು ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಕಾಶ ಹುಜ್ಜಕ್ಕೆ ಸನ್ಮಾನಿಸಿದರು. ಸಂಘದ ಮಾಜಿ ಉಪಾಧ್ಯಕ್ಷ ಬಾಹುಬಲಿ ಘುಲ್ಲೆ, ಮಹಾವೀರ ದಾಂಡಗೆ, ಜಾವೇದ ಮುಜಾವರ, ಹೂಮಾಯುನ ಸನದಿ, ರವೀಂದ್ರ ಕುಂಬಾರ, ಅರುಣ ಕರೆಪ್ಪಗೋಳ, ವಿವೇಕ ಪಾಟೀಲ, ರಾಜೇಂದ್ರ ದಡ್ಡೆ, ಕಾಂತಿನಾಥ ಕೆಂಚಗೌಡಾ, ಜಿನ್ನಪ್ಪ ಬಸನ್ನವರ, ಭರತೇಶ ವಂದೂರೆ, ಅಪ್ಪಾಸಾಬ ಮದೆನ್ನವರ ಇತರರಿದ್ದರು.

Leave a Reply

Your email address will not be published.