ಉಡುಪಿ: ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ ಪ್ರಕರಣ ಸುಖಾಂತ್ಯವಾಗಲು ಯಾವುದೇ ಕಷ್ಟವಿರಲಿಲ್ಲ ಎಲ್ಲವೂ ಸಾಮರಸ್ಯದಿಂದ ನಡೆಯುತ್ತಿದೆ ದೋಸ್ತಿ ಸರಕಾರ ಸುಭದ್ರವಾಗಿದೆ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಲ್ ಡಿ ಬ್ಯಾಂಕ್ ಬಗ್ಗೆ ಯಾವುದೇ ವಿವಾದಗಳಿರಲಿಲ್ಲ. ಸಂಧಾನದಿಂದ ಬ್ಯಾಂಕ್ ಚುನಾವಣೆ ಸುಖಾಂತ್ಯ ಕಂಡಿದೆ. ನನ್ನ ಜತೆ ಎಲ್ಲ ನಾಯಕರ ಭಾಂಧವ್ಯ ಹೊಂದಿದ್ದಾರೆ. ಬೆಳಗಾವಿಯಲ್ಲಿ ಏನಾಗಿದೆ , ರೆಬೆಲ್ ಯಾರು ಎಂದು ನೀವು ರಮೇಶ ಜಾರಕಿಹೊಳಿ ಅವರನ್ನೇ ಕೇಳಿ ಎಂದರು.
ಎಂದು ನಾನು ಟೆನ್ಶನ್ ಮಾಡೋಂಡಿಲ್ಲ. ಯಾಕೆ ಟೆನ್ಶನ್ ಮಾಡ್ಕೋಬೇಕು ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಐದು ವರ್ಷ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಪ್ರವಾಸ ಮಾಡೋದು ತಪ್ಪಾ? ಅವರೇನು ಒಬ್ಬರೇ ಪ್ರವಾಸಕ್ಕೆ ಹೋಗಿದ್ದಾರಾ? ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಎಸೆದರು.