ವಿಡಿಯೋ: ನಾನು ಯಾರಿಗೂ ಕೇರ್ ಮಾಡಲ್ಲ: ಕಾಂಗ್ರೆಸ್ ಮುಖಂಡರಿಗೆ ಆವಾಜ್ ಹಾಕಿದ ಬಿಜೆಪಿ ಶಾಸಕ‌ ಎಸ್ ವಿ ರಾಮಚಂದ್ರಪ್ಪ


ದಾವಣಗೆರೆ: ಜಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಕಡೆಗಣನೆ ಆರೋಪ ಹಿನ್ನಲೆ ಕಾಂಗ್ರೆಸ್ ಮುಖಂಡರು ಸಭೆಯಲ್ಲಿ ಮಾತಿನ ಚಕಮಕಿ ನಡೆಸಿದ್ದಕ್ಕೆ ಶಾಸಕ ಎಸ್ ವಿ ರಾಮಚಂದ್ರಪ್ಪ ಕಾಂಗ್ರೆಸ್ ಮುಖಂಡರಿಗೆ ಆವಾಜ್ ಹಾಕಿದ ಘಟನೆ ನಡೆದಿದೆ.

ಜಗಳೂರು ತಾಲೂಕು ಸೊಕ್ಕೆಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ತಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನ ವೇದಿಕೆಗೆ ಸ್ವಾಗತಿಸದಿದ್ದಕ್ಕೆ ಮಾತಿನ ಚಕಮಕಿ ನಡೆಯಿತು. ಶಾಸಕ ಸೇರಿ ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ನವರಿಂದ ಆಕ್ರೋಶ ವ್ಯಕ್ತವಾಯಿತು. ಈ ಹಿನ್ನಲೆ ಶಾಸಕ ರಾಮಚಂದ್ರಪ್ಪ, ನಾನು ಯಾರಿಗೂ ಕೇರ್ ಮಾಡಲ್ಲ
ಎಂದು ಜಿಲ್ಲಾಧಿಕಾರಿ ರಮೇಶ್ ಅವರ ಮುಂದೆಯೇ ಕಾಂಗ್ರೆಸ್ ಮುಖಂಡರಿಗೆ ಆವಾಜ್ ಹಾಕಿ, ಬೇಕಿದ್ದರೆ ನಂದೆ ಸೀಟು ಬಿಟ್ಟುಕೊಡುತ್ತೇನೆ ಬನ್ನಿ ಎಂದರು.

Leave a Reply

Your email address will not be published.