ಬಿಜು ಜನತಾದಳದಿಂದ ಮಾಜಿ ಸಚಿವ ರಾವತ್ ಉಚ್ಚಾಟನೆ


ಭುವನೇಶ್ವರ (ಒಡಿಸ್ಸಾ): ಒಡಿಸ್ಸಾದ ಮಾಜಿ ಸಚಿವ ದಾಮೋದರ ರಾವತ್ ಅವರನ್ನು ಬಿಜು ಜನತಾದಳದಿಂದ ಬುಧವಾರ ಉಚ್ಛಾಟಿಸಲಾಗಿದೆ.

ಪಕ್ಷದ ಅಧ್ಯಕ್ಷ ಹಾಗೂ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ನೀಡಿರುವ ಸೂಚನೆ ಮೇರೆಗೆ ಈ ಉಚ್ಛಾಟನೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಕಾರ್ಯದರ್ಶಿ ಬಿಜಯ ನಾಯಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರಕಾರದ ಕೆಲವು ಇಲಾಖೆಗಳಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂದು ರಾವತ್ ಕಳೆದ ವಾರ ಆರೋಪಿಸಿದ್ದರು.

ಓಡಿಸ್ಸಾ ಹಾಲು ಉತ್ಪಾದಕರ ಸಂಘದಲ್ಲಿ 30 ಕೋಟಿ ರೂ. ಗಳ ಅವ್ಯವಹಾರ ಆಗಿದೆ ಎಂದು ರಾವತ್ ಆರೋಪಿಸಿದ್ದರು.

Leave a Reply

Your email address will not be published.