ಹೊಸಪೇಟೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಕರಿಗೆ ಪರಿಹಾರ ವಿತರಣೆ


ಹೊಸಪೇಟೆ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗದ ವತಿಯಿಂದ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಸಂಬಂಧಿಕರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.

ಹರಿಹರದ ಬಸ್ ನಿಲ್ದಾಣದ ಬಳಿಯ ಕೀರ್ತಿ ಹೋಟೆಲ್ ಸಮೀಪ ಮೇ.18 ರಂದು ಹೊಸಪೇಟೆ ವಿಭಾಗದ ಕೆ.ಎ.35/ಎಫ್.398 ನಂಬರಿನ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶ್ರೀಪತಿ ಮೃತಪಟ್ಟಿದ್ದರು. ಮೃತನ ಪತ್ನಿ ಜೆ.ಎಸ್.ನಯನ ಅವರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಮೊಹ್ಮದ್ ಫೇಜ್ 35 ಸಾವಿರ ರೂ. ಗಳ ಪರಿಹಾರದ ಚೆಕ್ ವಿತರಿಸಿದರು.

ಜ.25 ರಂದು ಭಾವಿಹಳ್ಳಿ-ಬನ್ನಿಕಲ್ಲು ರಸ್ತೆಯಲ್ಲಿ ಜರುಗಿದ ರಸ್ತೆ ಅಪಘಾತದಲ್ಲಿ ಹಡಗಲಿ ಘಟಕದ ಕೆ.ಎ.34/ಎಫ್.1037 ನಂಬರಿನ ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಬಿ.ಮಂಜುನಾಥ ಮೃತಪಟ್ಟಿದ್ದ ಹಿನ್ನಲೆಯಲ್ಲಿ ಮೃತ ವ್ಯಕ್ತಿಯ ತಂದೆ ನಾಗೇಂದ್ರಪ್ಪ ಅವರಿಗೂ 35 ಸಾವಿರ ರೂ ಗಳ ಪರಿಹಾರದ ಧನದ ಚೆಕ್ ವಿತರಿಸಲಾಯಿತು.

ಸಂಸ್ಥೆಯ ಸ್ಥಳೀಯ ವಿಭಾಗೀಯ ಕಛೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಮೊಹ್ಮದ್ ಫೈಜ್, ಮೃತ ಕುಟುಂಬಗಳ ಸಂಬಂಧಿಕರಿಗೆ ಪರಿಹಾದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಅಂಕಿ ಸಂಖ್ಯೆ ಅಧಿಕಾರಿ ಜೆ.ಮಂಜುನಾಥ ಉಪಸ್ಥಿತರಿದ್ದರು.

Leave a Reply

Your email address will not be published.