ಮಕ್ಕಳ ಕಳ್ಳನೆಂದು ವ್ಯಕ್ತಿ ಹತ್ಯೆ: ಮೃತನ ಪತ್ನಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಚೆಕ್ ವಿತರಣೆ

ಮಕ್ಕಳ ಕಳ್ಳನೆಂದು ವ್ಯಕ್ತಿ ಹತ್ಯೆ: ಮೃತನ ಪತ್ನಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಚೆಕ್ ವಿತರಣೆ


ಇಂಡಿ:   ಮಕ್ಕಳ ಕಳ್ಳನೆಂದು ಭಾವಿಸಿ  ಮಹಾರಾಷ್ಟ್ರದ ರಾಯನಪಿಡಾ ಗ್ರಾಮದಲ್ಲಿ  ಉದ್ರಿಕ್ತರಿಂದ ಹತ್ಯೆಗೊಳಗಾಗಿದ್ದ ರಾಜು ಭೋಸಲೆ  ಅವರ ಪತ್ನಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ಧನ ಚೆಕ್ ನ್ನು ಶಾಸಕ ಯಶವಂತ್ರಾಯಗೌಡ ವಿತರಿಸಿದರು.

ನಗರದ ಪ್ರವಾಸಿ ಮಂದಿರಲ್ಲಿ ಪರಿಹಾರ ವಿತರಣಾ ಸಭೆಯಲ್ಲಿ ರಾಜು ಭೋಸಲೆ ಪತ್ನಿ ಇಂದಾಬಾಯಿ ಅವರು ಪರಿಹಾರ ನಿಧಿ ಚೆಕ್ ಪಡೆದರು.

ಮಕ್ಕಳ ಕಳ್ಳನೆಂದು ಭಾವಿಸಿ ಉದ್ರಿಕ್ತ ಯುವಕರು ಗುಂಪೊಂದು ಇಂಡಿ ತಾಲೂಕಿನ ಗುಂದವಾನ ಗ್ರಾಮದ ರಾಜು ಬೋಸಲೆ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದರು.

Leave a Reply

Your email address will not be published.