ಸೆ. 25 ರೊಳಗೆ ಸಂಪುಟ ವಿಸ್ತರಣೆ?


ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಸಂಪುಟ ವಿಸ್ತರಣೆ ಬಹಳ ದಿನ ಮುಂದಕ್ಕೆ ಹೋಗುವುದಿಲ್ಲ. ಸೆಪ್ಟಂಬರ್ 25 ರೊಳಗೆ ಸಂಪುಟ ವಿಸ್ತರಣೆ ಮಾಡಿಯೇ ತೀರುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಡುವೆಯೇ ಈ ಹೇಳಿಕೆ ನೀಡಿರುವ ಖಂಡ್ರೆ, ಅಧಿಕಾರ ಹಿಡಿಯಲು ಬಿಜೆಪಿ ವಾಮಮಾರ್ಗ ಅನುಸರಿಸುತ್ತಿದೆ ಎಂದು ದೂಷಿಸಿದರು.

ಆದರೆ, ಬಿಜೆಪಿಯ ಈ ಷಡ್ಯಂತ್ರಕ್ಕೆ ತಮ್ಮ ಪಕ್ಷದ ಯಾವ ಶಾಸಕರೂ ಮಣಿಯುವುದಿಲ್ಲ. ಬಿಜೆಪಿಯವರು ಏನೇ ಆಮಿಷ ಒಡ್ಡಿದರೂ ನಮ್ಮ ಪಕ್ಷದ ಶಾಸಕರು ಆ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದರು.

Leave a Reply

Your email address will not be published.