ಕುಷ್ಟಗಿ: ವಾಲ್ಮೀಕಿ ವೃತ್ತ ಪುನ್ಃ ನಿರ್ಮಾಣಕ್ಕೆ ಒತ್ತಾಯ

 

ಕುಷ್ಟಗಿ:  ಇಲ್ಲಿನ ಪುರಸಭೆ ರಸ್ತೆಯಲ್ಲಿರುವ  ವಾಲ್ಮೀಕಿ ವೃತ್ತವನ್ನು ವಾಲ್ಮೀಕಿ ಜಯಂತ್ಯುತ್ಸವ ಮುಂಚೆ ಅಭಿವೃದ್ಧಿ ಪಡಿಸಬೇಕು ಎಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಕಾರ್ಯಕರ್ತರು ಶಾಸಕ ಅಮರೇಗೌಡ ಬಯ್ಯಾಪುರ ಅವರಿಗೆ   ಭಾನುವಾರ ಮನವಿ ಸಲ್ಲಿಸಿದರು.

ರಸ್ತೆ ವಿಸ್ತರಣೆಗಾಗಿ ವಾಲ್ಮೀಕಿ ವೃತ್ತವನ್ನು ನೆಲೆಸಮಗೊಳಿಸಿ ಈಗ ಪುನ್ಃ ನಿರ್ಮಾಣ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಅದನ್ನು  ವಾಲ್ಮೀಕಿ ಜಯಂತ್ಯುತ್ಸವ ಮುಂಚೆ ಅಭಿವೃದ್ಧಿ ಪಡಿಸಬೇಕು ಎಂದು ಕಾರ್ಯಕರ್ತರು ಶಾಸಕರಿಗೆ ಮನವಿಸಲ್ಲಿಸಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ ಶಾಸಕ ಸಂಬಂಧಪಟ್ಟ ಅಧಿಕಾರಿಗಳೊಂಡಿಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಭರವಸೆ ನೀಡಿದರು. 
 
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಸತ್ಯಪ್ಬ ಬಸಾಪುರ, ಉಪಾಧ್ಯಕ್ಷ ಕನಕಪ್ಪ ನಾಯಕವರು,  ಕನಕಪ್ಪ ಅಳ್ಳಳ್ಳಿ,  ಮದಕರಿ ನಾಯಕ,ಅಡಿವೇಶ್ ಹಜಾಳ ಹಾಗೂ ಜಗದೀಶ್ ನಾಯಕ ಇದ್ದರು.

Leave a Reply

Your email address will not be published.