ಕೊಪ್ಪಳದ ಛಾಯಾಗ್ರಾಹಕ ಮಾರುತಿ ಕಟ್ಟಿಮನಿ, ಈರಣ್ಣ ಬಡಿಗೇರಗೆ ರಾಜ್ಯ ಪ್ರಶಸ್ತಿ


ಕೊಪ್ಪಳ: ನಗರದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ಛಾಯಾಗ್ರಾಹಕರಾದ ಮಾರುತಿ ಕಟ್ಟಿಮನಿ ಮತ್ತು  ಈರಣ್ಣ ಬಡಿಗೇರರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲಾಗಿದೆ ಎಂದು ಸಂಘಟಕರಾದ ರಮೇಶ ಸುರ್ವೆ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

ಮೈಸೂರಿನ ಟೌನ್‌ಹಾಲ್‌ನಲ್ಲಿ ಸೆ.  15 ರಂದು ಸಂಜೆ 5ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾವೇರಿ ಕರ್ನಾಟಕ ಸಾಂಸ್ಕೃತಿಕ ಹಬ್ಬ ಎಂಬ ಒಂದು ದಿನದ ವಿಶೇಷ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುತ್ತಿದ್ದು, ಈರಣ್ಣ ಬಡಿಗೇರ ಅವರ ಮೊಬೈಲ್ ಫೋಟೊಗ್ರಫಿ ಚಾಯಾಚಿತ್ರ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿದೆ.

ಈರಣ್ಣ ಬಡಿಗೇರ್ ಬಿಟಿವಿ ಖಾಸಗಿ ವಾಹಿನಿಯಲ್ಲಿ ವಿಡಿಯೋ ಜರ್ನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರೆ ಮಾರುತಿ ಕಟ್ಟಿಮನಿ ಟಿವಿ 9 ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೇಗೌಡ ಸೇರಿದಂತೆ ಮಠಾಧೀಶರು, ಕಲಾವಿದರು, ಸಾಹಿತಿಗಳು ಪಾಲ್ಗೊಳ್ಳುವರು. ಇವರ ಜೊತೆಗೆ ಸಾಂಸ್ಕೃತಿಕ ಸಂಘಟಕ ಶಿವಪ್ರಸಾದ ಮಠಪತಿ ಗಾಯಕರಾದ ವಿಜಯಕುಮಾರ ಜಿ. ಗೊಂಡಬಾಳ, ಸಂಡೂರು ಹುಸೇನ ಭಾಷಾರವರಿಗೂ ಪ್ರಶಸ್ತಿ ನೀಡಲಾಗುವುದು ಎಂದು  ರಮೇಶ ಸುರ್ವೆ ತಿಳಿಸಿದ್ದಾರೆ.

Leave a Reply

Your email address will not be published.