ಮೀಸಲಾತಿ ಬದಲಾವಣೆಗೆ ವಿರೋಧ: ಹೈಕೊರ್ಟ್ ನಿಂದ ತಡೆಯಾಜ್ಞೆ


ಕೊಪ್ಪಳ : ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲೆ ಮೀಸಲಾತಿ ನಿಗದಿಗೊಳಿಸಿ ಪ್ರಕಟಿಸಲಾಗಿತ್ತು, ನಂತರದಲ್ಲಿ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಾವಣೆ ಮಾಡಲಾಗಿದ್ದನ್ನು ವಿರೋಧಿಸಿ  ಸದಸ್ಯೆಯೊಬ್ಬರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

ಪರಿಶಿಷ್ಟ ಜಾತಿ ಸ್ಥಾನಕ್ಕೆ ಇದ್ದ ಮೀಸಲಾತಿಯನ್ನು ಬಿಸಿಎಗೆ ಬದಲಾಯಿಸಲಾಗಿತ್ತು. ಇದನ್ನು ಶಾಸಕ ರಾಘವೇಂದ್ರ ಹಿಟ್ನಾಳ ಮಾಡಿಸಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. 3ನೇ ವಾರ್ಡಿನ ಸದಸ್ಯ ಅಮ್ಜದ ಪಾಟೀಲ್‌ರನ್ನು ಅಧ್ಯಕ್ಷರನ್ನಾಗಿ ಮಾಡುವ ಉದ್ದೇಶದಿಂದ ಈ ಮೀಸಲಾತಿ ಬದಲಾವಣೆ ಮಾಡಲಾಗಿತ್ತು. ಹೀಗಾಗಿ ಸರ್ಕಾರದ ನಡೆಗೆ ವಿರುದ್ಧ ಪರಿಶಿಷ್ಟ ಜನಾಂಗದ ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಸಹ ನಡೆಸಿದ್ದರು.

ಹೈಕೋರ್ಟ ಮೆಟ್ಟಲೇರಿದ ಸದಸ್ಯೆ ದೇವಕ್ಕ : ಪರಿಶಿಷ್ಟ ಜಾತಿ ಮಹಿಳೆಗೆ ಇದ್ದ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಪ್ರಶ್ನಿಸಿ 26ನೇ ವಾರ್ಡಿನ ಪರಿಶಿಷ್ಟ ಜನಾಂಗದ ಬಿಜೆಪಿ ಸದಸ್ಯೆ ದೇವಕ್ಕ ಕಂದಾರಿ ಹೈಕೋರ್ಟ್ ಮೆಟ್ಟಿಲೇರಿ ಕೊನೆಗೂ ತಡೆಯಾಜ್ಞೆ ತಂದಿದ್ದಾರೆ. ವಿಚಾರಣೆ ನಡೆಸುವವರೆಗೂ ಸೆ. 20ರವರೆಗೆ ಚುನಾವಣೆ ನಡೆಸದಂತೆ ಕೋರ್ಟ್ ಆದೇಶ ಹೊರಡಿಸಿದೆ.

Leave a Reply

Your email address will not be published.