ಬೆಳಗಾವಿಯಲ್ಲಿ ನಾಳೆ ಸಿಎಂ ಜನತಾದರ್ಶನ


ಬೆಳಗಾವಿ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಬೆಳಗಾವಿಯಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಸಲಿದ್ದಾರೆ.

ನಾಳೆ ಕೆಎಲ್ ಎಸ್ ಸಂಸ್ಥೆಯ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಜತೆ ಪಾಲ್ಗೊಂಡ ನಂತರ ಮಧ್ಯಾಹ್ನ 3 ಗಂಟೆಗೆ ಸಿಎಂ ಸುವರ್ಣ ಸೌಧದಲ್ಲಿ ಜನತಾದರ್ಶನ ನಡೆಸಲಿದ್ದಾರೆ.

ರಾಜ್ಯದ ಹೊರಭಾಗದಲ್ಲಿ ಸಿಎಂ ಕುಮಾರಸ್ವಾಮಿ ಇದೇ ಮೊದಲ ಬಾರಿ ಜನತಾದರ್ಶನ ಹಮ್ಮಿಕೊಂಡಿರುವುದು ವಿಶೇಷ. ಮಧ್ಯಾಹ್ನ 3 ರಿಂದ ಸುಮಾರು 2 ಗಂಟೆ ಕಾಲ ಸಿಎಂ ಜನತಾದರ್ಶನ ಕಾರ್ಯಕ್ರಮ ನಡೆಯಲಿದೆ.

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಹವಾಲುಗಳನ್ನು ನೇರವಾಗಿ ಸಿಎಂ ಗೆ ತಲುಪಿಸಲು ಜನತಾದರ್ಶನ ವೇದಿಕೆ ಕಲ್ಪಿಸಲಿದೆ.

Leave a Reply

Your email address will not be published.