ಮಧುಗಿರಿ ಪುರಸಭೆ ಮತ್ತೆ ಕಾಂಗ್ರೆಸ್ ತೆಕ್ಕೆಗೆ


ಮಧುಗಿರಿ: ಪುರಸಭೆ 23 ವಾರ್ಡ್ ಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು,  ಕಾಂಗ್ರೆಸ್ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ   ಗದ್ದುಗೆ ಹಿಡಿದಿದೆ.

23 ವಾರ್ಡಗಳಲ್ಲಿ  13 ಸ್ಥಾನ ಕಾಂಗ್ರೆಸ್ ಪಡೆದರೆ, 9 ಜೆಡಿಎಸ್ ತಕ್ಕೆಗೆ ಒಲಿದಿದೆ. ಒಂದು ಸ್ಥಾನ ಪಕ್ಷೇತರ ಪಾಲಾಗಿದೆ.

ಈ ಹಿಂದಿನ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದ ಕೆ.ಎನ್.ರಾಜಣ್ಣ ಚುನಾವಣಾ ಕಣದಿಂದ ದೂರ ಉಳಿದು ತಮ್ಮ ಪಕ್ಷದ ಎರಡನೇ ಹಂತದ ಮುಖಂಡರ ಮೂಲಕ ರಾಜಕೀಯ ಚಕ್ರವ್ಯೂಹ ಭೇದಿಸಿ ಚಾಣಾಕ್ಷ ತನದಿಂದ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಪುರಸಭೆಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಜಯಶೀಲರಾಗಿದ್ದಾರೆ.

ಜೆಡಿಎಸ್ ಪಕ್ಷದ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಚುನಾವಣಾ ಪ್ರಚಾರದಲ್ಲಿ ಸತತವಾಗಿ ತೊಡಗಿಕೊಂಡು ಶ್ರಮವಹಿಸಿದರು ಕೂಡ ಅವರ ಪಕ್ಷಕ್ಕೆ ಬಾರಿ ಮುಖಭಂಗ ಅನುಭವಿಸಿ ತ್ರೀರ್ವ ಮುಜಗರಕ್ಕೆ ಒಳಗಾಗಿದ್ದಾರೆ. ಕಾಂಗ್ರೆಸ್‍ಗೆ ಬಹುಮತವಿದ್ದರೂ ಅಧಿಕಾರದಿಂದ ದೂರವಿಡಲೂ ಜೆಡಿಎಸ್ ರಣತಂತ್ರ ರೂಪಿಸುತ್ತಿರುವ ಬಗ್ಗೆ ಪಟ್ಟಣದಲ್ಲಿ ಕೂತೂಹಲ ಭರಿತ ಚರ್ಚೆಗಳು ನಡೆಯುತ್ತಿವೆ.

23 ವಾರ್ಡುಗಳಲ್ಲಿ ಜಯಳಿಸಿದ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ:

1ನೇ ವಾರ್ಡ್ ಸಾಮಾನ್ಯ ಮಹಿಳೆ: ಪಕ್ಷೇತರ ಅಭ್ಯರ್ಥಿ ಅಸೀಯಾಬಾನು 330, ಮುಬಾಶಿರಾ ಬಾನು (ಕಾಂಗ್ರೆಸ್) 185 ಶಕೀಲಾ ಬಾನು 166 (ಜೆಡಿಎಸ್) ಅಸ್ಮತ್ ವುನ್ನೀಸಾಷರೀಫ್ 145 (ಪಕ್ಷೇತರ) ನೋಟಾ 3 ಮತಗಳು ಚಲಾವಣೆಯಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 145 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

2ನೇ ವಾರ್ಡ್ ಪರಿಶಿಷ್ಟ ಜಾತಿ: ಎಂ.ವಿ.ಗೋವಿಂದರಾಜು 369, (ಕಾಂಗ್ರೆಸ್) ಸುಬ್ರಮಣ್ಯ 296 (ಜೆಡಿಎಸ್) ಪಕ್ಷೇತರರಾದ ಟಿ.ಹೆಚ್ ದೀಲೀಪ್ 40 ಹನುಮಂತರಾಯಪ್ಪ 32 ನೋಟಾ 1 ಮತಗಳು ಚಲಾವಣೆಯಾಗಿವೆ. ಜೆಡಿಎಸ್ ಅಭ್ಯರ್ಥಿ ವಿರುದ್ಧ 73 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

3ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ: ನಸೀಮಾಬಾನು 338 (ಕಾಂಗ್ರೆಸ್) ರುಕೀಬೀ ಷರೀಫ್ 177 (ಜೆಡಿಎಸ್) ಅಸೀನಾ ಬಾನು 25 (ಬಿಜೆಪಿ) ಜಯಮ್ಮ 147 (ಪಕ್ಷೇತರು) ನೋಟಾ 07 ಜೆಡಿಎಸ್ ಅಭ್ಯರ್ಥಿ ವಿರುದ್ಧ 161 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಆಯ್ಕೆಯಾಗಿದ್ದಾರೆ.

4ನೇ ವಾರ್ಡ್ ಸಾಮಾನ್ಯ: ಆಲೀಮುಲ್ಲಾ 442 (ಕಾಂಗ್ರೆಸ್) ಸೈಯದ್‍ಕರೀಂ 325 (ಜೆಡಿಎಸ್), ಆರ್.ಡಿ.ಅಭಿಷೇಕ್ ಜೈನ್ 34 (ಬಿಜೆಪಿ) ಅಬ್ದುಲ್‍ಲತೀಫ್ 55 (ಪಕ್ಷೇತರು)  ಜೆಡಿಎಸ್ ಅಭ್ಯರ್ಥಿ ವಿರುದ್ಧ 73 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಆಯ್ಕೆಯಾಗಿದ್ದಾರೆ.ನೋಟಾ 0, ಜೆಡಿಎಸ್ ಅಭ್ಯರ್ಥಿ ವಿರುದ್ಧ 117 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

5ನೇ ವಾರ್ಡ್ ಸಾಮಾನ್ಯ: ಎಂ.ಎಲ್.ಗಂಗರಾಜು 311 (ಜೆಡಿಎಸ್), ಎಸ್.ದಯಾನಂದ್ 221 (ಕಾಂಗ್ರೆಸ್), ಬಿ.ಹೀತೇಷ್ 5 (ಬಿಜೆಪಿ) ನೋಟಾ 01, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 90 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

6ನೇ ವಾರ್ಡ್ ಹಿಂದುಳಿದ ವರ್ಗ ಬಿ: ಸಿ.ನಟರಾಜು 419 (ಕಾಂಗ್ರೆಸ್) ಚಿಕ್ಕಣ್ಣ 386 (ಜೆಡಿಎಸ್) ನೋಟಾ 05 ಜೆಡಿಎಸ್ ಅಭ್ಯರ್ಥಿ ವಿರುದ್ಧ 33 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಆಯ್ಕೆಯಾಗಿದ್ದಾರೆ.

7ನೇ ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ: ಪುಟ್ಟಮ್ಮ 545 (ಕಾಂಗ್ರೆಸ್) ಭವಾನಿ 481 (ಜೆಡಿಎಸ್). ನೋಟಾ 05 ಜೆಡಿಎಸ್ ಅಭ್ಯರ್ಥಿ ವಿರುದ್ಧ 64 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಆಯ್ಕೆಯಾಗಿದ್ದಾರೆ.

8ನೇ ವಾರ್ಡ್ ಪರಿಶಿಷ್ಟ ಪಂಗಡ ಮಹಿಳೆ: ಪಾರ್ವತಮ್ಮ 539 (ಜೆಡಿಎಸ್) ಯಶೋಧ ಅಂಜಿನಪ್ಪ 323 (ಕಾಂಗ್ರೆಸ್), ನೋಟಾ 12 ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 216 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

9ನೇ ವಾರ್ಡ್ ಹಿಂದುಳಿದ ವರ್ಗ ಎ: ಎಂ.ವಿ.ಮಂಜುನಾಥ್ 460 (ಜೆಡಿಎಸ್). ಎಂ.ಇ.ಕರಿಯಣ್ಣ 278 (ಕಾಂಗ್ರೆಸ್) ಎಲ್ ರವಿ ಕಿರಣ್ 21 (ಬಿಜೆಪಿ) ಎಸ್.ಶಂಕರಲಿಂಗ 04 (ಪಕ್ಷೇತರ) ನೋಟಾ 04 ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 182 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

10ನೇ ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ: ಗಿರಿಜಾ 472 (ಕಾಂಗ್ರೆಸ್) ಸುಜಾತ ಪಿ.ಭಾಸ್ಕರ್ 188 (ಜೆಡಿಎಸ್), ನೋಟಾ 03 ಜೆಡಿಎಸ್ ಅಭ್ಯರ್ಥಿ ವಿರುದ್ಧ 284 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

11ನೇ ವಾರ್ಡ್ ಸಾಮಾನ್ಯ ಮಹಿಳೆ: ಶಾಹೀನಾ ಕೌಸರ್ ಶಕೀಲ್ 577 (ಕಾಂಗ್ರೆಸ್) ಎನ್.ಟಿ.ಸಿದ್ದಲಕ್ಷ್ಮಮ್ಮ 230 (ಜೆಡಿಎಸ್), ಪೈರೋಜ್ ಖಾನಂ 02 (ಪಕ್ಷೇತರ) ನೋಟಾ 03 ಜೆಡಿಎಸ್ ಅಭ್ಯರ್ಥಿ ವಿರುದ್ಧ 216 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

12ನೇ ವಾರ್ಡ್ ಸಾಮಾನ್ಯ ಮಹಿಳೆ: ಎನ್.ಶೋಭಾರಾಣಿ 485 (ಕಾಂಗ್ರೆಸ್) ಸಲೀಂವುನ್ನೀಸಾ ಆಲ್ತಾಫ್ 180 (ಜೆಡಿಎಸ್) ನೋಟಾ 06 ಜೆಡಿಎಸ್ ಅಭ್ಯರ್ಥಿ ವಿರುದ್ಧ 305 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

13ನೇ ವಾರ್ಡ್ ವಾರ್ಡ್ ಹಿಂದುಳಿದ ವರ್ಗ ಎ: ನರಸಿಂಹಮೂರ್ತಿ 408 (ಜೆಡಿಎಸ್) ಪಿ.ಆರ್.ಶ್ರೀರಂಗರಾಜು 258 (ಕಾಂಗ್ರೆಸ್) ನೋಟಾ 02 ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 150 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

14ನೇ ವಾರ್ಡ್ ಸಾಮಾನ್ಯ ಮಹಿಳೆ: ಎನ್.ಬಿ.ಗಾಯತ್ರಿ 501 (ಕಾಂಗ್ರೆಸ್) ರಾಧ 282 (ಜೆಡಿಎಸ್) ನೋಟಾ 05 ಜೆಡಿಎಸ್ ಅಭ್ಯರ್ಥಿ ವಿರುದ್ಧ 219 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

15ನೇ ವಾರ್ಡ್ ಸಾಮಾನ್ಯ : ನಾರಾಯಣ್ 424 (ಜೆಡಿಎಸ್) ಕೆ.ಪ್ರಕಾಶ್ 368 (ಕಾಂಗ್ರೆಸ್) ಎಂ.ರಾಜೇಶ್ 16 (ಬಿಜೆಪಿ) ಎಂ.ಎಸ್.ಬದ್ರೀನಾಥ್ 19 (ಪಕ್ಷೇತರ) ನೋಟಾ 0, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 56 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

16ನೇ ವಾರ್ಡ್ ಸಾಮಾನ್ಯ: ಎಂ.ಆರ್.ಜಗನ್ನಾಥ್ 635 (ಜೆಡಿಎಸ್) ವೆಂಕಟೇಶ್ 148 (ಕಾಂಗ್ರೆಸ್) ಎಂ.ಇ. ದೀಕ್ಷೀತ್ 12 (ಬಿಜೆಪಿ) ನೋಟಾ 00 ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 487 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

17ನೇ ವಾರ್ಡ್ ಪರಿಶಿಷ್ಟ ಜಾತಿ: ಎಂ.ಎಸ್.ಚಂದ್ರಶೇಖರ್ 474 (ಕಾಂಗ್ರೆಸ್) ಎಂ.ವಿ.ಬಾಲಾಜಿ ಬಾಬು 359 (ಜೆಡಿಎಸ್) ಮಂಜುನಾಥ 12 (ಬಿಜೆಪಿ) ಎಂ.ಎಸ್.ರಾಘವೇಂದ್ರ 62 (ಪಕ್ಷೇತರ) ನೋಟಾ 08 ಜೆಡಿಎಸ್ ಅಭ್ಯರ್ಥಿ ವಿರುದ್ಧ 115 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

18 ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ: ನಾಗಲತಾಲೋಕೇಶ್ 640 (ಕಾಂಗ್ರೆಸ್) ಪ್ರೇಮ 384 (ಜೆಡಿಎಸ್) ನೋಟಾ 10 ಜೆಡಿಎಸ್ ಅಭ್ಯರ್ಥಿ ವಿರುದ್ಧ 256 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

19ನೇ ವಾರ್ಡ್ ಸಾಮಾನ್ಯ: ಚಂದ್ರಶೇಖರ್ ಬಾಬು 416 (ಜೆಡಿಎಸ್) ನರಸಿಂಹಮೂರ್ತಿ 351 (ಕಾಂಗ್ರೆಸ್) ಆರ್.ಭರತೇಶ್ 06 (ಬಿಜೆಪಿ) ಸಿ.ರಾಜು 37 (ಪಕ್ಷೇತರ) ನೋಟಾ 01 ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 65 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

20ನೇ ವಾರ್ಡ್ ಸಾಮಾನ್ಯ ಮಹಿಳೆ: ರಾಧಿಕ ಆನಂದಕೃಷ್ಣ 660 (ಕಾಂಗ್ರೆಸ್) ಇಂದ್ರಮ್ಮ 330 (ಜೆಡಿಎಸ್), ನೋಟಾ 13 ಜೆಡಿಎಸ್ ಅಭ್ಯರ್ಥಿ ವಿರುದ್ಧ 330 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

21ನೇ ವಾರ್ಡ್ ಪರಿಶಿಷ್ಟ ಪಂಗಡ: ತಿಮ್ಮರಾಜು 601 (ಜೆಡಿಎಸ್) ಎಂ.ಎನ್.ಮಾರುತಿ 195 (ಕಾಂಗ್ರೆಸ್) ನೋಟಾ 07 ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 406 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

22ನೇ ವಾರ್ಡ್ ಸಾಮಾನ್ಯ ಮಹಿಳೆ: ಜಿ.ಆರ್.ಸುಜಾತ 539 (ಕಾಂಗ್ರೆಸ್) ಲಲಿತಾ 399 (ಜೆಡಿಎಸ್). ಸಾವಿತ್ರಮ್ಮ 10 (ಪಕ್ಷೇತರ) ನೋಟಾ 07 ಜೆಡಿಎಸ್ ಅಭ್ಯರ್ಥಿ ವಿರುದ್ಧ 140 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

23ನೇ ವಾರ್ಡ್ ಹೆಚ್ಚುವರಿ ಮತಗಟ್ಟೆ ಸೇರಿದಂತೆ ಸಾಮಾನ್ಯ: ಜಿ.ಎ.ಮಂಜುನಾಥ್ 668 (ಜೆಡಿಎಸ್) ಪಿ.ಎಲ್.ನರಸಿಂಹಮೂರ್ತಿ 268 (ಬಿಜೆಪಿ) ಲಕ್ಷ್ಮೀನಾರಾಯಣ 231 (ಕಾಂಗ್ರೆಸ್) ಶ್ರೀ ಹರಿಗಣೇಶ್ 03 (ಬಿಎಸ್‍ಪಿ) ನೋಟಾ 06 ಬಿಜೆಪಿ ಅಭ್ಯರ್ಥಿ ವಿರುದ್ಧ 400 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published.