ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ: ಮಾಧ್ಯಮಗಳ ಎದುರು ಸಚಿವ ರಮೇಶ ಮನವಿ


ಬೆಂಗಳೂರು: ” ಎಲ್ಲ ಅಸಮಾಧಾನವೂ ಬಗೆಹರಿದಿದೆ. ಕೋಪ ಇದ್ದೇ ಇರುತ್ತದೆ. ಕೋಪ ಇಲ್ಲದಿದ್ದರೆ ಮನುಷ್ಯನೇ ಅಲ್ಲ”

ಹೀಗೆಂದು ಹೇಳಿದವರು ಸದ್ಯ ಭಾರೀ ಸುದ್ದಿಯಲ್ಲಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ !

ನಿನ್ನೆಯಷ್ಟೇ  ಪಕ್ಷದ ವರಿಷ್ಠರ ವಿರುದ್ದ ನಿನ್ನೆಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಜಾರಕಿಹೊಳಿ , ಇಂದು ಡಿಸಿಎಂ ಪರಮೇಶ್ವರ ಹಾಗೂ ಪಕ್ಷದ ಅಧ್ಯಕ್ಷ ದಿನೇಶ ಗುಂಡೂರಾವ್ ಜತೆ ಚರ್ಚಿಸಿದ್ದೇನೆ. ಎಲ್ಲವೂ ಬಗೆಹರಿದಿದೆ.

ಎಲ್ಲವೂ ಮುಗಿದ ಅಧ್ಯಾಯ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಮಾಧ್ಯಮಗಳ ಎದುರು ಮನವಿ ಮಾಡಿಕೊಂಡರು.

ಸತೀಶ ಜಾರಕಿಹೊಳಿ ಅವರು ಏನು ನಿರ್ಣಯ ತೆಗೆದುಕೊಳ್ಳುತ್ತಾರೆಂಬುದು ಮಾಹಿತಿ ಇಲ್ಲ ಎಂದು ಹೇಳಿದರು.

ಪಕ್ಷ ಬಿಡುವ ಪ್ರಶ್ನೆ ಇಲ್ಲ ಎಂದು ಜಾರಕಿಹೊಳಿ ಹೇಳಿದರಾದರೂ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತೆ ಇರುವುದು  ಗಮನಾರ್ಹ.

Leave a Reply

Your email address will not be published.