ಮುದ್ದೇಬಿಹಾಳ ಪತ್ರಕರ್ತ ಸಂಘ ಅಧ್ಯಕ್ಷರಾಗಿ ಅಮೀನಸಾಬ್ ಮುಲ್ಲಾ ಅವಿರೋಧ ಆಯ್ಕೆ


ಮುದ್ದೇಬಿಹಾಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅಮೀನಸಾಬ್ ಮುಲ್ಲಾ, ಉಪಾಧ್ಯಕ್ಷರಾಗಿ ಗುರುನಾಥ ಕತ್ತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶಿವು ಬಿದರಕುಂದಿ, ರವಿಕುಮಾರ ಕಟ್ಟಿಮನಿ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದು ಚಲವಾದಿ, ಕಾರ್ಯದರ್ಶಿಗಳಾಗಿ ಲಾಳೇಮಶ್ಯಾಕ ನದಾಫ, ಸಾಗರ ಉಕ್ಕಲಿ, ಕಾಶೀನಾಥ ಬಿರಾದಾರ, ಖಜಾಂಚಿಯಾಗಿ ಪರಶುರಾಮ ಕೊಣ್ಣೂರ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಗೆ ಪತ್ರಕರ್ತರಾದ ಕೆ.ಎಂ.ರಿಸಾಲ್ದಾರ್, ಅಲ್ಲಾಭಕ್ಷ ನಿಡಗುಂದಿ, ಎಚ್.ಆರ್.ಬಾಗವಾನ, ಶ್ರೀಶೈಲ ಬಿರಾದಾರ, ಸಂಗಮೇಶ ಸ್ಥಾವರಮಠ, ಶಿವಕುಮಾರ ಶಾರದಳ್ಳಿ, ಮುತ್ತು ವಡವಡಗಿ, ರವೀಂದ್ರ ನಂದೆಪ್ಪನವರ್, ನುರೇನಬಿ ನದಾಫ್, ಸಂತೋಷ ಶಹಾಪುರ, ಚೇತನ್ ಕೆಂಧೂಳಿ, ಬಂದೇನವಾಜ್ ಕುಮಸಿ, ನೂರ್‍ಎಹುಸೇನ್ ನದಾಫ್, ಲಕ್ಷ್ಮಣ ಫಿರಂಗಿ, ರಿಯಾಜಅಹ್ಮದ್ ಮುಲ್ಲಾ ಆಯ್ಕೆಯಾದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ವಡವಡಗಿ ವಹಿಸಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಹಿಬೂಬ ಹಳ್ಳೂರ ಇದ್ದರು.

Leave a Reply

Your email address will not be published.