ಪಾಂಡವಪುರ ಪುರಸಭೆಯಲ್ಲಿ ಜೆಡಿಎಸ್ ಜಯಭೇರಿ


ಪಾಂಡವಪುರ: ಆ.31 ರಂದು ಪಾಂಡವಪುರ ಪುರಸಭೆಯ 23 ವಾರ್ಡ್‍ಗಳಿಗೆ ನಡೆದಿದ್ದ ಚುನಾವಣೆಯ ಮತ ಏಣಿಕೆ ಕಾರ್ಯ ಇಂದು ಮುಗಿದಿದ್ದು, 18 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಜೆಡಿಎಸ್ ಜಯಭೇರಿ ಬಾರಿಸಿದೆ.

ಒಟ್ಟು 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 18 ಸ್ಥಾನಗಳಿಸಿ ಜೆಡಿಎಸ್ ಅಧಿಕಾರ ಹಿಡಿದರೆ, ಉಳಿದ 5 ಸ್ಥಾನಗಳಲ್ಲಿ ಮೂರು ಕಾಂಗ್ರೆಸ್, ರೈತ ಸಂಘ ಮತ್ತು ಬಿಜೆಪಿ ತಲಾ ಒಂದು ಸ್ಥಾನ ಗಳಿಸಿವೆ.

ಪಾಂಡವಪುರ ಪುರಸಭೆಯ 23 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಮತ್ತು ರೈತಸಂಘ ಸ್ಥಾನ ಹೊಂದಾಣಿಕೆ ಮಾಡಿಕೊಂಡು 13 ವಾರ್ಡ್‍ಗಳಲ್ಲಿ ರೈತಸಂಘ ಮತ್ತು 10 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್‍ಗೆ ಸೆಡ್ಡು ಹೊಡೆಯಲು ಯತ್ನಿಸಿದ್ದರು. ಈ ಮಧ್ಯೆ ಬಿಜೆಪಿ 14 ಸ್ಥಾನಗಳಿಗೆ ಮತ್ತು ಬಿಎಸ್‍ಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, 9 ಮಂದಿ ಪಕ್ಷೇತರ ಅಭ್ಯರ್ಥಿಗಳು ಸಹಾ ಸ್ಪರ್ಧಿಸಿದ್ದರು.

ಪ್ರಮುಖರ ಸೋಲು : ಗೆಲುವಿನ ನಿರೀಕ್ಷೆಯಲ್ಲಿದ್ದ ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಶ್ರೀನಿವಾಸು, ಹುಚ್ಚೇಗೌಡ, ಚೊಚ್ಚಲ ಬಾರಿಗೆ ಪುರಸಭೆ ಪ್ರವೇಶಕ್ಕೆ ಯತ್ನಿಸಿದ್ದ ವಕೀಲ ಜಿ.ಬಿ.ಸುರೇಶ, ಜೆಡಿಎಸ್ ಯುವ ಮುಖಂಡ ಎಂ.ಎಲ್.ಆದರ್ಶ ಮತ್ತು ಅಂತೋಣಿ ಸೋಲನ್ನಪ್ಪಿದ್ದಾರೆ.

ಗೆದ್ದವರ ಸಂಭ್ರಮ : ಪಾಂಡವಪುರ ಪುರಸಭೆಯ 23 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಎಲ್ಲ ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮೆರವಣಿಗೆ ಮೂಲಕ ತಮ್ಮ ತಮ್ಮ ವಾರ್ಡ್‍ಗಳಿಗೆ ತೆರಳಿ ಮತದಾರರಿಗೆ ಕೃಜಜ್ಞತೆ ಸಲ್ಲಿಸಿದರು.

Leave a Reply

Your email address will not be published.