ಡಿಕೆಶಿ-ಪರಂ ಮಾತುಕತೆ


ಬೆಂಗಳೂರು: ಬೆಳಗಾವಿ ರಾಜಕೀಯದಲ್ಲಿ ಎದ್ದಿರುವ ಬಿರುಗಾಳಿಯನ್ನು ತಣ್ಣಗಾಗಿಸುವ ಕುರಿತಂತೆ ಡಿಸಿಎಂ ಪರಮೇಶ್ವರ ಮತ್ತು ಸಚಿವ ಡಿ.ಕೆ. ಶಿವಕುಮಾರ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸಭೆ ನಡೆಸುತ್ತಿರುವ  ಇಬ್ಬರೂ ನಾಯಕರು ಜಾರಕಿಹೊಳಿ ಸಹೋದರರ ಬಂಡಾಯ, ಸಂಪುಟ ವಿಸ್ತರಣೆ ಕುರಿತಂತೆ ಚರ್ಚಿಸುತ್ತಿದ್ದಾರೆ.

ಇಡೀ ರಾಜಕೀಯ ಬೆಳವಣಿಗೆಗೆ ತಾವೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published.