ಸಿದ್ಧು ಬಂದ ನಂತ್ರ ಸಂಪುಟ ವಿಸ್ತರಣೆ ಅಂತಾ ಹೇಳಿದ್ರು ಪರಮ್ !


ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಆಗಮಿಸಿದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಡಿಸಿಎಂ ಪರಮೇಶ್ವರ ಹೇಳಿದ್ದಾರೆ.

ಯಾವ ಸಮುದಾಯಕ್ಕೆ ಎಷ್ಟು ಆದ್ಯತೆ ಕೊಡಬೇಕು, ಯಾವ ಖಾತೆ ಕೊಡಬೇಕು ಎಂಬ ಕುರಿತಂತೆ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ ಹೇಳಿರುವುದು ಸಿದ್ದು ಇನ್ನೂ ಪಾವರ್ ಫುಲ್ ಎಂಬುದನ್ನು ಸಾಬೀತು ಪಡಿಸಿದೆ.

ಏತನ್ಮಧ್ಯೆ ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ತಪ್ಪು. ಇಲಾಖೆಯ ಕೆಲಸಗಳ ನಿಮಿತ್ತ ಬೆಳಗಾವಿಗೆ ಭೇಟಿ ನೀಡಿದರೆ ಅದು ಹಸ್ತಕ್ಷೇಪ ಹೇಗಾಗುತ್ತದೆ ಎಂದು ಅವರು ಮರುಪ್ರಶ್ನೆ ಹಾಕಿದ್ದಾರೆ.

Leave a Reply

Your email address will not be published.