ಬಳ್ಳಾರಿಗೆ ಮಂತ್ರಿಗಿರಿ ಬೇಕೆಂದು ಪಟ್ಟು ಹಿಡಿದ ಇನ್ನೊಬ್ಬ ಶಾಸಕ !


ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಡುವೆಯೇ ಬಳ್ಳಾರಿಗೆ ಒಂದು ಸಚಿವ ಸ್ಥಾನ ನೀಡಲೇಬೇಕು ಎಂದು ನಿನ್ನೆ ಹಗರಿಬೊಮ್ಮನಳ್ಳಿ ಶಾಸಕ ಭೀಮಾ ನಾಯ್ಕ ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಅದೇ ಜಿಲ್ಲೆಯ ಇನ್ನೊಬ್ಬ ಶಾಸಕ ಪಿ.ಟಿ. ಪರಮೇಶ್ವರ ನಾಯಕ ಜಿಲ್ಲೆಗೆ ಸಚಿವ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ ನಾಯಕ, ಡಿಕೆಶಿಗೆ ಬಳ್ಳಾರಿ ಉಸ್ತುವಾರಿ ವಿಚಾರದಲ್ಲಿ ತಮ್ಮದೇನೂ ತಕರಾರಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೆ, ಆರು ಶಾಸಕರನ್ನು ಗೆಲ್ಲಿಸಿರುವ ಜಿಲ್ಲೆಗೆ ಒಂದು ಸಚಿವ ಸ್ಥಾನ ಬೇಕೇ ಬೇಕು ಎಂದು ಗಟ್ಟಿಯಾಗಿ ಹೇಳಿರುವುದು ಕುತೂಹಲ ಮೂಡಿಸಿದೆ.

Leave a Reply

Your email address will not be published.