ರಕ್ಷಿತ್- ರಶ್ಮಿಕಾ ನಿಶ್ಚಿತಾರ್ಥ ಮುರಿದು ಬಿತ್ತಾ?


ಬೆಂಗಳೂರು:  ಸ್ಯಾಂಡಲ್ ವುಡ್ ಕಿರಿಕ್ ಜೋಡಿ ಸಂಬಂಧದಲ್ಲಿ ಬಿರುಕು ಮೂಡಿದ್ದು, ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಲವ್ ಬ್ರೇಕ್ ಅಪ್ ಆಗಿದೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಏಂಟ್ರಿಕೊಟ್ಟಿದ್ದ ರಶ್ಮಿಕಾ ಮೊದಲ ಚಿತ್ರದಲ್ಲಿ ಕನ್ನಡ ಸಿನಿಮಾರಂಗದಲ್ಲಿ  ಸಖತ್ ಫೇಮಸ್ ಆಗಿದ್ದರು. ತೆರೆ ಮೇಲೆ ರಕ್ಷಿತ್ ಶೆಟ್ಟಿಯೊಂದಿಗೆ ಜೋಡಿಯಾಗಿದ್ದ ರಶ್ಮಿಕಾ ನಿಜ ಜೀವನದಲ್ಲಿಯೂ ಲವ್ ನಲ್ಲಿದ್ದರು. ಅಲ್ಲದೇ ಮನೆಯವರ ಒಪ್ಪಿಗೆ ಮೂಲಕ ಕಳೆದ ಒಂದು ವರ್ಷದ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಗೀತ-ಗೋವಿಂದಂ ಸಿನಿಮಾ ಮೂಲಕ ಟಾಲಿವುಡ್ ಗೆ ಏಂಟ್ರಿ ಕೊಟ್ಟಿದ್ದ ರಶ್ಮಿಕಾ ಸದ್ಯ ಟಾಲಿವುಡ್ ನಲ್ಲಿ ಬೇಡಿಕೆ ನಟಿಯಾಗಿದ್ದಾರೆ. ಗೀತಾ-ಗೋವಿಂದಂ ಚಿತ್ರ ಸೆಟ್ಟೆರುತ್ತಿದ್ದಂತೆ ರಕ್ಷಿತ- ರಶ್ಮಿಕಾ ರಶ್ಮಿಕಾ ಬ್ರೇಕ್ ಅಪ್ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಫ್ ಎಲ್ಲೆಡೆ ಹರಿದಾಡಿತ್ತು. ಅಲ್ಲದೇ ಟ್ರೋಲ್ ಪೇಜ್ ನಿಂದ ಕಿರಿಕಿರಿ ಅನುಭವಿಸಿದ್ದ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದಲೂ ಹೊರಬಂದಿದ್ದರು. ಕೊನಗೆ ಕುಟುಂಬಸ್ಥರೊಂದಿಗೆ ಚರ್ಚಿಸಿ ಬ್ರೇಕ್ ಆಗೋ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಟಾಲಿವುಡ್ ನಲ್ಲಿ ಬ್ಯೂಸಿ ಆಗಿರುವ ರಶ್ಮಿಕಾ ಮಂದಣ್ಣ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರಂತೆ.

Leave a Reply

Your email address will not be published.