ಯಾದಗಿರಿ ಜಿಲ್ಲೆ ದಲಿತ ಸೇನೆಯ ಕಾರ್ಯದರ್ಶಿಯಾಗಿ ಶರಣರೆಡ್ಡಿ ಹತ್ತಿಗೂಡುರು ನೇಮಕ


ಶಹಾಪುರ:  ದಲಿತ ಸೇನೆಯ ಯಾದಗಿರಿ ಜಿಲ್ಲಾ ಘಟಕದ ಕಾರ್ಯದರ್ಶಿಯನ್ನಾಗಿ ಶರಣರೆಡ್ಡಿ ಹತ್ತಿಗೂಡುರ ಅವರನ್ನು ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬುದ್ಧ ಬಸವ ಅಂಬೇಡ್ಕರ್ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ದೀನ ದಲಿತರ ಶೋಷಿತರ ಬಡವರ ಪರವಾಗಿ ಹೋರಾಟ ಮಾಡಿ ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಿ ಮುಂದಿನ ದಿನಗಳಲ್ಲಿ ಹೋರಾಟದ ರೂಪರೇಷೆಗಳನ್ನು ಸಿದ್ಧ ಮಾಡಿಕೊಳ್ಳಬೇಕು ಎಂದ ದಲಿತ ಸೇನೆಯ ರಾಜ್ಯ ಸಂಚಾಲಕರಾದ ಮಲ್ಲಿಕಾರ್ಜುನ ಅನಸೂರ ಅವರು ಅಭಿನಂದನೆ ಸಲ್ಲಿಸಿದ್ದಾರೆ. 

Leave a Reply

Your email address will not be published.