ಯಡಿಯೂರಪ್ಪ ಮತ್ತೆ ಸಿಎಂ ಆಗಲಿ ಅಂತ ಹರಕೆ ಹೊತ್ತ ಸಂಸದ ಅಂಗಡಿ !


ಮೂಡಲಗಿ: ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಪ್ರಾರ್ಥಿಸುವುದಾಗಿ ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.ಸಮೀಪದ ಕಲ್ಲೋಳಿಯಲ್ಲಿ ಸೆ 10ರಿಂದ ನಡೆಯುತ್ತಿರುವ  47ನೇ ವೇದಾಂತ ಪರಿಷತ ಅಂಗವಾಗಿ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿಗಳ ಪ್ರಸಾದ ನಿಲಯ ಉದ್ಘಾಟಿಸಿ ಮಂಗಳವಾರ  ಮಾತನಾಡಿದರು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗೂವವರೆಗೂ ಸಿದ್ದಾರೂಡ ಮಠಗಳಿಗೆ ಸರ್ಕಾರದ ಅನುದಾನಗಳು ಸಿಕ್ಕಿರಲಿಲ್ಲ. ಮೊದಲು ಸಿಕ್ಕಿದ್ದು ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮಕ್ಕೆ,

ಬಿಎಸ್‍ವಾಯ್ ಮುಖ್ಯ ಮಂತ್ರಿಯಾದ ತಕ್ಷಣ ದೇವರ ಕಲ್ಲೋಳಿ ಎಂದೆ ಪ್ರಸಿದ್ದಿ ಪಡೆದ ಕಲ್ಲೋಳಿ ಪಟ್ಟಣಕ್ಕೆ ಕರೆದುಕೊಂಡು ಭೇಟಿ ಮಾಡಿಸುತ್ತೆನೆ ಧಾರ್ಮಿಕ ಕ್ಷೇತ್ರ ಸೇರಿದಂತೆ ಈ ಭಾಗದ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನ ತರಲು ಶ್ರಮೀಸುತ್ತೆನೆ ಎಂದರು
ಆಧ್ಯಾತ್ಮದಲ್ಲಿ ಯುವಕರ ಪಾತ್ರ ಕಡಿಮೆಯಾಗುತ್ತಿರುವದು ಕಳವಳಕಾರಿ ವಿಷಯ ಈ ಕುರಿತು ಹಿರಿಯರು ತಿಳಿವಳಿಕೆ ಹೇಳುವ ಕಾರ್ಯ ಮಾಡಬೇಕು, ಸನ್ಯಾಸತ್ವವನ್ನು ಸ್ವೀಕರಿಸುಲು ಹೊರಟ ಯುವಕ ಕೋಲ್ಕತ್ತಾದ ಪರಮಹಂಸರಂಥ ಮಹಾತ್ಮರ ಆಶಿರ್ವಾದ ಇದ್ದಿದರಿಂದ ದೇಶದ ಪ್ರಧಾನಿಯಾದರು ಅವರೆ ನರೇಂದ್ರ ಮೋದಿ, ಸಿದ್ದಾರೂಡರ ಆಶಿರ್ವಾದದಿಂದ ನಾನು ಕೊಡ ಸಂಸದನಾಗಿದ್ದೆನೆ ಎಂದ ಅವರು ಸಿದ್ದಾರೂಡ ಸೇವೆಯನ್ನು ಮಾಡುತ್ತೆನೆ ಮಾಡುತ್ತಾ ಇರುತ್ತೆನೆ ಎಂದರು

ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಈರಣ್ಣಾ ಕಡಾಡಿ ಮಾತನಾಡಿ, ಸಾಂಸದರು ಶ್ರೀಮಠಕ್ಕೆ ರೂ 13 ಲಕ್ಷ ಅನುಧಾನ ನೀಡಿದ್ದಾರೆ ಹೆಚ್ಚಿನ ಅನುದಾನ ನೀಡುವಂತೆ ಕೇಳಿಕೊಳ್ಳುತ್ತೆನೆ, ಮಠದ ಸಮೀಪದ ಕೆನಾಲ್ ರಸ್ತೆ ಹಾಗೂ ನೀರಾವರಿ ಕೆಲಸಗಳು ಸಾಂಸದರ ನೇತೃತ್ವದಲ್ಲಿ ನೆರವೇರಲಿ ಎಂದು ಮನವಿ ಮಾಡಿದ ಅವರು ಎಲ್ಲರೂ ವೈಯಕ್ತಿಕ ಕೆಲಸದ ಕಡೆ ಗಮನ ಕೊಡುತ್ತಿರುವಾಗ ಸಾರ್ವಜನಿಕ ಕೆಲಸಕ್ಕೆ ತೊಡಗುವರು ಕಡಿಮೆಯಾಗಿದ್ದಾರೆ ಅಂಥದರಲ್ಲಿ ಶ್ರೀ ಸಿದ್ದಾರೂಡ ಮಠದ ಭಕ್ತರ ಕಾರ್ಯ ಪ್ರಶಂಸನೀಯ ಎಂದರು

ಸಮಾರಂಭದ ಸಾನಿಧ್ಯವನ್ನು ಡಾ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿಗಳು ವಹಿಸಿ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಧಾರ್ಮಿಕ ಕಾರ್ಯಗಳನ್ನು ಮಾಡುವದರಿಂದ ಅವರನ್ನು ನಾಡಿನ ಜನತೆ ಮನಸ್ಸಿನಲ್ಲಿಟು ಕೊಂಡಿದ್ದಾರೆ ಅವರು ಮತ್ತೆ ರಾಜ್ಯಭಾರ ಮಾಡಲಿ ಇನ್ನು ಉತ್ತಮ ಕಾರ್ಯ ಅವರಿದ್ದ ಆಗಲಿ ಎಂದ ಅವರು ಪ್ರತಿಯೋಬ್ಬರಲ್ಲಿ ಇಂದು ಸಂಸ್ರ್ಕುತಿ ಕಡಿಮೆಯಾಗಲು ಟಿ,ವ್ಹಿ, ಮೋಬೈಲ ಹಾವಳಿ, ದೂಮಪಾನ ಮದ್ಯಪಾನಗಳೆ ಕಾರಣ ಆದರಿಂದ ಮನುಷ್ಯ ಆ ಚಟಗಳಿಂದ ಮುಕ್ತರಾಗಲಿ ಎಂದರು

ಹಾವೇರಿ ತಾಲೂಕಿನ ಐರಣಿ ಗ್ರಾಮದ ಹೊಳೆ ಮಠಾಧೀಶ್ವರ ಶ್ರೀ ಜಗದ್ಗುರು ಬಸವರಾಜ ದೇಶಕೇಂದ್ರ ಮಹಾಸ್ವಾಮಿಜಿಗಳು, ಹಂಪಿಯ ಶ್ರೀ ಶಿವರಾಮಾವದೊತ ಆಶ್ರಮದ ಶ್ರೀ ವಿಧ್ಯಾನಂದ ಭಾರತಿ ಮಹಾಸ್ವಾಮಿಜಿಗಳು, ಹರಳಕಟ್ಟಿಯ ಶ್ರೀ ಶಿವಾನಂದ ಮಠದ ಶ್ರೀ ನಿಜಗುಣ ಮಹಾಸ್ವಾಮಿಜಿಗಳು, ಸುಭಾಷಿತ ಸಂತ ಶ್ರೀ ರಾಮಾನಂದ ಮಹಾಸ್ವಾಮಿಜಿಗಳು,ದಾವಣಗೇರಿಯ ಶ್ರೀ ಶಿವಾನಂದ ಮಹಾಸ್ವಾಮಿಜಿಗಳು,ಶ್ರೀ ಚಿದಾನಂದ ಮಹಾಸ್ವಾಮಿಜಿಗಳು,ಶ್ರೀ ಪ್ರಿಯಾನಂದ ಮಹಾಸ್ವಾಮಿಜಿಗಳು,ಶ್ರೀ ಸಚ್ಚಿದಾನಂದ ಮಹಾಸ್ವಾಮಿಜಿಗಳು, ಸುಜ್ಞಾನ ಕುಟಿರದ ಶ್ರೀ ಮಲ್ಲೆಶ್ವರ ಮಹಾಸ್ವಾಮಿಜಿಗಳು, ಸವಟಗಿಯ ಶ್ರೀ ಮಹಾಸ್ವಾಮಿಜಿಗಳು ವೇದಾಂತ ಪರಿಷತದಲ್ಲಿ ಭಾಗಿಯಾಗಿದ್ದರು
ಸಮಾರಂಭದಲ್ಲಿ ಸಿದ್ದಾರೂಡ ಮಠದ ಟ್ರಸ್ಟ ಕಮಿಟಿಯ ಅಧ್ಯಕ್ಷ ಮಲ್ಲ ಸವಸುದ್ದಿ, ಭೀಮಶೆಪ್ಪ ಖಾನಾಪೂರ, ಅರ್ಜುನ ಚಿಕ್ಕೋಡಿ, ಶಿವಸಂಗಪ್ಪ ತುಪ್ಪದ, ಶ್ರೀಕಾಂತ ಕರೆಪ್ಪಗೋಳ, ಈಶ್ವರ ಮುಧೋಳ, ಶ್ರೀಶೈಲ ತುಪ್ಪದ, ಬಸವರಾಜ ಖಾನಾಪೂರ, ಅಡಿವೇಪ್ಪ ಕುರಬೇಟ, ಬಸವರಾಜ ಸಂಪಗಾವಿ, ಮಹಾದೇವ ಖಾನಾಪೂರ ಉಪಸ್ಥಿತರಿದ್ದರು
ಟ್ರಸ್ಟಿನ ಕಾರ್ಯದರ್ಶಿ ಭಗವಂತ ಪತ್ತಾರ ನಿರೋಪಿಸಿ ವಂದಿಸಿದರು

 

Leave a Reply

Your email address will not be published.