ಸುರಪುರ: ದಲಿತ ಸೇನೆ ಪದಾಧಿಕಾರಿಗಳ ಆಯ್ಕೆ

ನಗರದ ಟೈಲರ್ ಮಂಜಿಲನಲ್ಲಿ ದಲಿತ ಸೇನೆಯ ತಾಲ್ಲೂಕ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಸುರಪುರ: ದೇಶದಲ್ಲಿ ಕೋಮು ಸಂಘರ್ಷ ಹೆಚ್ಚುತ್ತಿದೆ.ದಲಿತ ಶೋಷಿತರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ,ಇದನ್ನು ನಾವೆಲ್ಲ ಸಂಘಟಿತರಾಗಿ ವಿರೋಧಿಸುವ ಅವಶ್ಯವಿದ ಎಂದು ದಲಿತ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅನಕಸುಗೂರ ಮಾತನಾಡಿದರು.

ನಗರದ ಟೈಲರ್ ಮಂಜಿಲನಲ್ಲಿ ಸೇನೆಯ ತಾಲ್ಲೂಕ ಘಟಕ ರಚನೆಗಾಗಿ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಹಿಂದಿನ ಕಾಲದ ಅಸ್ಪಶ್ಯತೆ ಇಂದು ಕೂಡ ಜೀವಂತವಾಗಿದೆ.ಡಾ:ಬಾಬಾ ಸಾಹೇಬ ಅಂಬೇಡ್ಕರರು ಸಂವೀಧಾನ ರಚಿಸಿಕೊಟ್ಟರು,ಅದನ್ನು ಅರಿಯುವಲ್ಲಿ ನಾವು ಹಿಂದೆ ಬಿದ್ದಿದ್ದೆ ಇದಕ್ಕೆ ಕಾರಣ ಆದ್ದರಿಂದ ನಾವೆಲ್ಲ ಶಿಕ್ಷಣ ಸಂಘಟನೆ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಮಾತನಾಡಿ,ಸೇನೆಯ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿಯವರ ಮಾರ್ಗದರ್ಶನದಲ್ಲಿ ಇಂದು ತಾಲ್ಲೂಕು ಪದಾಧಿಕಾರಿಗಳಾಗಿ ನಿಮ್ಮನ್ನ ಆಯ್ಕೆಗೊಳಿಸಿದ್ದು,ಸಂಘಟನೆಯ ತತ್ವ ಸಿಧ್ದಾಂತಗಳಿಗೆ ಬಧ್ದರಾಗಿ ಹೋರಾಟಗಳ ರೂಪಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದಲಿತ ಸೇನೆಯ ತಾಲ್ಲೂಕ ಪದಾಧಿಕಾರಿಗಳಾಗಿ ನಿಂಗಣ್ಣ ಗೋನಾಲ ಅಧ್ಯಕ್ಷ,ಮಾನಪ್ಪ ಕಟ್ಟಿಮನಿ,ಅಬ್ದುಲ್ ಬಾಷಾ,ಪರಮಣ್ಣ ಹಂದ್ರಾಳ ಉಪಾಧ್ಯಕ್ಷರು,ಹುಲಗಪ್ಪ ದೇವತ್ಕಲ್ ಪ್ರ.ಕಾರ್ಯದರ್ಶಿ,ಜಗದೀಶ ಯಕ್ತಾಪುರ,ತಾಯಪ್ಪ ದೊಡ್ಮನಿ,ಸುರೇಶ ಅಮ್ಮಾಪುರ ಸಂಘಟನಾ ಕಾರ್ಯದರ್ಶಿಗಳು,ಶಿವಣ್ಣ ನಾಗರಾಳ ಖಜಾಂತಿ ಹಾಗು ಸುಭಾಷ ತೇಲ್ಕರ್ ಕಾನೂನು ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ಪ್ರ.ಕಾರ್ಯದರ್ಶಿ ಶರಣು, ಭೀಮಣ್ಣ ಕಡಿಮನಿ,ಸುಭಾಷ ತೇಲ್ಕರ್, ಶರಣಬಸವ ಚತುರ್ವೇದಿ ಇತರರಿದ್ದರು.

Leave a Reply

Your email address will not be published.