ಕೆಐಎಡಿಬಿ ಅಧಿಕಾರಿಗೆ ಎಸಿಬಿ ಶಾಕ್


ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಮಲ್ಲೇಶ್ವರಂ ನಲ್ಲಿ ಎಸಿಬಿ ದಾಳಿ ನಡೆದಿದ್ದು, ಕೆಐಎಡಿಬಿ ಅಧಿಕಾರಿಯೊಬ್ಬರಿಗೆ ಶಾಕ್ ನೀಡಿದ್ದಾರೆ.

ಮಂತ್ರಿಗ್ರೀನ್ಸ್ ನ 14 ಮಹಡಿಯಲ್ಲಿರುವ ಕೆಐಎಡಿಬಿ ಅಧಿಕಾರಿ ಟಿ. ಆರ್ ಸ್ವಾಮಿ ಮನೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಬಾಗಿಲು ತೆರೆಯದ್ದರಿಂದ ಬೀಗ ಒಡೆದು ಒಳಗೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಐದು ಕೋಟಿ ರೂ. ನಗದು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಮನೆಯಿಂದ ಬ್ಯಾಗೊಂದನ್ನು ಹೊರಕ್ಕೆ ಎಸೆಯಲಾಗಿದೆ.

ಬ್ಯಾಗು ಎರಡನೇ ಮಹಡಿಯ ಪೈಪ್ ಲೈನ್ ಮೇಲೆ ಪತ್ತೆಯಾಗಿದ್ದು, ಅದರಲ್ಲಿಯೂ ಸಾಕಷ್ಟು ಪ್ರಮಾಣದ ಹಣ ಮತ್ತು ದಾಖಲೆಗಳಿರುವ ಶಂಕೆ ವ್ಯಕ್ತವಾಗಿದೆ. ಹಣ ಎಣಿಕೆ ಮಾಡಲು ಅಧಿಕಾರಿಗಳು ಮಷಿನ್ ತಂದಿದ್ದಾರೆ. ತನಿಖೆ ಮುಂದುವರಿದಿದೆ.

Leave a Reply

Your email address will not be published.