ಬಿಡಿಎ ಮುಖ್ಯ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ


ಬೆಂಗಳೂರು: ಬಿಡಿಎ ಮುಖ್ಯ ಇಂಜಿನಿಯರ್ ಗೌಡಯ್ಯ ಅವರ ಬಸವೇಶ್ವರನಗರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಕಳೆದ ಏಳು ವರ್ಷಗಳಿಂದಲೂ ಬಿಡಿಎ ದಲ್ಲಿ ವಸತಿ ಸಮುಚ್ಚಯ ಉಸ್ತುವಾರಿಯಾಗಿರುವ ಗೌಡಯ್ಯ , ಅವರ ವಿರುದ್ಧ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಈ  ದಾಳಿ ನಡೆದಿದ್ದು, ಅಧಿಕಾರಿಗಳು ಶೋಧನೆ ಮುಂದುವರಿಸಿದ್ದಾರೆ.

ಗೌಡಯ್ಯ ಕಚೇರಿಗೂ ಬೀಗ ಜಡಿಯಲಾಗಿದ್ದು, ಅಲ್ಲೂ ಕಾಗದ ಪತ್ರಗಳಿರುವ ಅನುಮಾನದ ಮೇಲೆ ಅಲ್ಲಿಯೂ ತಪಾಸಣೆ ಮಾಡುವ ಸಾಧ್ಯತೆಗಳಿವೆ.

Leave a Reply

Your email address will not be published.