ಮಿನಿ ಬಸ್ ಅಪಘಾತ: ಸಚಿವರ ಸಹೋದರ ಸೇರಿ ಮೂವರ ಸಾವು


ಸಿಮ್ಲಾ (ಹಿಮಾಚಲ ಪ್ರದೇಶ): ಸಿಮ್ಲಾದ ಕಾಸುಂಪ್ತಿಯಿಂದ ರೋಹ್ರುಗೆ ತೆರಳುತ್ತಿದ್ದ ಮಿನಿ ಬಸ್ಸೊಂದು ಅಪಘಾತಕ್ಕೀಡಾಗಿ, ಸಚಿವರೊಬ್ಬರ ಸಹೋದರ ಸೇರಿದಂತೆ ಮೂವರು ಸಾವಿಗೀಡಾಗಿದ್ದು, ಇತರ ಹತ್ತು ಮಂದಿ ಗಾಯಗೊಂಡಿದ್ದಾರೆ.

ನಿನ್ನೆ ರಾತ್ರಿ ಚಾಯಿಲಾ ಬಜಾರ್ ಸೇತುವೆ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಹಿಮಾಚಲ ಪ್ರದೇಶದ ಶಿಕ್ಷಣ ಸಚಿವ ಸುರೇಶ ಭಾರದ್ವಾಜ ಅವರ ಸಹೋದರ ನಿತ್ಯಾನಂದ ಸೇರಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.