ಇವತ್ತಿನ ಸಮಾಜದಲ್ಲಿ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡೋದು ಅವಶ್ಯವಾಗಿದೆ: ನಟಿ ಶೃತಿ ಹರಿಹರನ್


ಬೆಂಗಳೂರು: #ಮಿ ಟೂ ಅಡಿ ನಟ ಅರ್ಜುನ ಸರ್ಜಾ ವಿರುದ್ದ ಸಿಡಿದೆದ್ದ ನಟಿ ಶೃತಿ ಹರಿಹರನ್,  ಇವತ್ತಿನ ಸಮಾಜದಲ್ಲಿ ಸೆಕ್ಸ್ ಬಗ್ಗೆ ಓಪನ್ ಆಗಿ ಮಾತನಾಡೋದು ಅವಶ್ಯವಾಗಿದೆ ಅಂತಾ  ಹೇಳಿದ್ದಾರೆ.

ಮಲ್ಲೇಶ್ವರಂನ ಕಲಕಾಂಬಾ ಥೇಟರ್ ನಲ್ಲಿ ರವಿವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್ಜುನ ಸರ್ಜಾ ಅವರು ಡಿನ್ನರೆ ಬಾ, ರೆಸಾರ್ಟ್ ಗೆ ಬಾ ಎಂದು ಹಲವು ಬಾರಿ ಕರೆದರು ನಾನು ನೋ ಎಂದಿದ್ದೇನೆ. ಆಗ ಹೇಳಿಕೊಳ್ಳಲು ನನಗೆ ಧೈರ್ಯ ಇರಲಿಲ್ಲ. ಆದರೆ ಈಗ ನನಗೆ ಧೈರ್ಯ ಬಂದಿದೆ. ನನಗೆ ಪಬ್ಲಿಸಿಟಿ ಅವಶ್ಯಕತೆ ಇಲ್ಲ. ಮಿ ಟೂ ಅಭಿಯಾನ ನನಗೆ ಅವಕಾಶ ನೀಡಿದೆ. ಘಟನೆ ನಡೆದು ಒಂದುವರೆ ವರ್ಷದ ಬಳಿಕ ಹೇಳ್ತಿದ್ದೇನೆ.  ಮಿಟೂ ಅಭಿಯಾನದಿಂದ ನನಗೆ ತುಂಬಾ ಧೈರ್ಯ ಬಂದಿದೆ. ಚಿತ್ರರಂಗದಲ್ಲಿ ನಾನು ಸಾಕಷ್ಟು ಕಿರುಕುಳ ಅನುಭವಿಸಿದ್ದೇನೆ ಎಂದು ಅವರು ತಮ್ಮ ನೋವು ತೋಡಿಕೊಂಡರು.

ಮುಚ್ಚಿ ಹೋದ ಕೇಸ್ ಗಳಿಗೆ ಜೀವ ಬರಲಿ:

ಚಿತ್ರರಂಗದಲ್ಲಿ ನಾನು ತುಂಬ ಕಿರುಕುಳ ಅನುಭವಿಸಿದ್ದೇನೆ. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ನಲ್ಲಿ ಹಲವರ ಹೆಸರು ಹೇಳಿದ್ದೇನೆ.  ಎಷ್ಟೋ ಕೇಸ್ ಗಳು ಮುಚ್ಚಿ ಹೋಗಿವೆ. ಅಂತಹ ಕೇಸ್ ಗಳಿಗೆ ಮರು ಜೀವ ಬರಲಿ. ಇತ್ತೀಚಿಗೆ ಫೇಸ್ ಬುಕ್ ನಲ್ಲಿ ನಾಲ್ಕೈದು ಪ್ರಕರಣಗಳು ಹೊರ ಬಂದಿದ್ದವು. ನನ್ನ ಕೈಯಿಂದ ಆದಷ್ಟು ನಾನು ಹೇಳಿದ್ದೇನೆ. ಪ್ರಕರಣ ಸಂಬಂಧ ನಾನು ಕಾನೂನು ಹೋರಾಟ ನಡೆಸಲು ಸೂಕ್ತ ದಾಖಲಾತಿಗಳನ್ನು ಸಂಗ್ರಹ ಮಾಡುತ್ತಿದ್ದೇನೆ. ದಾಖಲೆ ಸಂಗ್ರಹವಾದ ಬಳಿಕ ಟೈ ಬಂದಾಗ  ಮತ್ತೆ ಮಾತನಾಡುತ್ತೇನೆ.

ಬೆದರಿಕೆ ಕರೆಗಳು ಬರುತ್ತಿವೆ:

ಚಿತ್ರರಂಗದಲ್ಲಿ ತುಂಬಾ ಜನರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಯಾರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ದರ್ಶನ, ಸುದೀಪ್ ಸರ್ ಅವರು ನನ್ನೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ. ಸೂಪರ್ ಸ್ಟಾರ್ ಗಳಾದರು ಸಮಯವನ್ನು ದುರುಪಯೋಗ ಪಡೆಸಿಕೊಳ್ಳಬಾರದು. ನಾನು ಸರ್ಜಾ ಅವರ ವಿರುದ್ದ ಆರೋಪ ಮಾಡಿದ ಬಳಿಕ ತುಂಬಾ ಬೆದರಿಕೆ ಕರೆಗಳು ಬರುತ್ತಿವೆ. ಸರ್ಜಾ ಪ್ಯಾನ್ಸ್ ಅಸೋಸಿಯೇಶನ್ ನಿಂದ ಹಲವು ಬೆದರಿಕೆ ಕರೆಗಳು ಬರುತ್ತಿವೆ. ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಮುಂದೆ ಕಾನೂನು ಹೋರಾಟ ನಡೆಸುವುದಾಗಿ ಶೃತಿ ಹರಿಹರನ್ ತಿಳಿಸಿದರು.

ಸುದ್ದಿಗೋಷ್ಠಿ  ನಟ ಚೇತನ್, ನಿರ್ದೇಶಕಿ ಕವಿತಾ ಲಂಕೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

 

Leave a Reply

Your email address will not be published.