ಹಾಡಹಗಲೇ ಬ್ಯಾಂಕಿಗೆ ನುಗ್ದಿ ದರೋಡೆ: ಗುಂಡಿಕ್ಕಿ ಕ್ಯಾಶಿಯರ್ ಹತ್ಯೆ !


ಹೊಸದಿಲ್ಲಿ: ಹಾಡಹಗಲೇ ಇಲ್ಲಿಯ ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ ನುಗ್ಗಿದ ದರೋಡೆಕೋರರು ಕ್ಯಾಶಿಯರ್ ನನ್ನು ಹತ್ಯೆಗೈದು ದರೋಡೆ ನಡೆಸಿದ್ದಾರೆ.

ಖೈರಾ ಪ್ರದೇಶದಲ್ಲಿರುವ ಕಾರ್ಪೋರೇಶನ್ ಬ್ಯಾಂಕಿಗೆ ನುಗ್ಗಿದ 6 ಕ್ಕೂ ಹೆಚ್ಚು ಜನರಿದ್ದ ದರೋಡೆಕೋರರು, ಸೆಕ್ಯೂರಿಟಿ ಮತ್ತು ಜನರಿಗೆ ಗನ್ ತೋರಿಸಿ ಬೆದರಿಕೆ ಹಾಕಿದರು. ಪ್ರತಿರೋಧ ವ್ಯಕ್ತಪಡಿಸಿದ ಕ್ಯಾಶಿಯರ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ದರೋಡೆಕೋರನೊಬ್ಬ ಪಿಸ್ತೂಲಿನಿಂದ ಯದ್ವಾ ತದ್ವಾ ಗುಂಡು  ಹಾರಿಸುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದ್ಲಿ ಸೆರೆಯಾಗಿದೆ.

Leave a Reply

Your email address will not be published.