ಡಿಕೆಶಿ ಟಿಫಿನ್ ಪಾಲಿಟಿಕ್ಸ್ : ಏನಿದು ವಿಶೇಷ?


ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಇನ್ನೇನು ಭಿನ್ನಮತ ಮುಗಿಯಿತು, ಸಂಪುಟ ವಿಸ್ತರಣೆ ಸರಾಗವಾಗಿ ನಡೆಯುತ್ತದೆ ಎಂದುಕೊಳ್ಳುತ್ತಿರುವ ನಡುವೆಯೇ ಸಚಿವ ಡಿ.ಕೆ. ಶಿವಕುಮಾರ ಅವರು ಇಂದು ತಮ್ಮ ನಿವಾಸದಲ್ಲಿ ಉಪಾಹಾರ ಏರ್ಪಡಿಸುವ ಮೂಲಕ ಕುತೂಹಲದ ಹೆಜ್ಜೆ ಇಟ್ಟಿದ್ದಾರೆ.

ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿಯೇ ಡಿಕೆಶಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಹೆಚ್ಚು -ಕಡಿಮೆ ಶಕ್ತಿ ಪ್ರದರ್ಶನ ನಡೆದಿದ್ದು, ಇಬ್ಬರು ಸಚಿವರು ಕೂಟಕ್ಕೆ ಗೈರು ಹಾಜರಾಗಿದ್ದರು.  ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ ಆಹ್ವಾನ ನೀಡದಿರುವುದೂ ಅಚ್ಚರಿಗೆ ಕಾರಣವಾಯಿತು.

ಸಚಿವ ರಮೇಶ ಜಾರಕಿಹೊಳಿ ಅವರು ಮುಂಬೈನಲ್ಲಿರುವುದಾಗಿ ತಮಗೆ ತಿಳಿಸಿದ್ದಾರೆ. ಸಚಿವ ರಾಜಶೇಖರ ಪಾಟೀಲರು ವಿದೇಶ ಪ್ರವಾಸದಲ್ಲಿದ್ದಾರೆ. ಹೀಗಾಗಿ ಉಪಾಹಾರ ಕೂಟಕ್ಕೆ ಆಗಮಿಸಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಮತ್ತು ದಿನೇಶ ಗುಂಡೂರಾವ್ ಅವರನ್ನು ಆಹ್ವಾನಿಸಿಲ್ಲ. ಎಲ್ಲದಕ್ಕೂ ಸಿದ್ದರಾಮಯ್ಯ ಅವರನ್ನು ಕರೆಯಲು ಆಗುವುದಿಲ್ಲ. ಪಕ್ಷದಲ್ಲಿ ಅವರನ್ನು ಕಡೆಗಣಿಸುವ ಪ್ರಶ್ನೆಯೂ ಇಲ್ಲ. ಅವರ ಸಲಹೆ-ಸೂಚನೆಯಂತೆಯೇ ಸರಕಾರ ನಡೆಯುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.

Leave a Reply

Your email address will not be published.